ದೇಶ

ಘಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ: 50 ಟ್ವೀಟ್‌ಗಳಿಗೆ ಟ್ವಿಟ್ಟರ್ ನಿಂದ ತಡೆ

Raghavendra Adiga

ನವದೆಹಲಿ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬನ ಕೋಮು ಸೂಕ್ಷ್ಮ ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿ 50 ಟ್ವೀಟ್‌ಗಳನ್ನು ಟ್ವಿಟ್ಟರ್ "ತಡೆಹಿಡಿದಿದೆ" ಎಂದು ಮೂಲಗಳು ತಿಳಿಸಿವೆ.

ಲುಮೆನ್ ಡೇಟಾಬೇಸ್  ಮಾಹಿತಿಯ ಪ್ರಕಾರ, ಟ್ವಿಟ್ಟರ್ 50 ಟ್ವೀಟ್‌ಗಳನ್ನು "ತಡೆಯಲು" ಜೂನ್ 17 ರಂದು ಭಾರತ ಸರ್ಕಾರದಿಂದ ಕಾನೂನು ವಿನಂತಿಯನ್ನು ಸ್ವೀಕರಿಸಿದೆ. ಈ ಟ್ವೀಟ್‌ಗಳನ್ನು ತಡೆಹಿಡಿಯಲಾಗಿದೆ ಮತ್ತು ಇದರಲ್ಲಿನ ವಿಷಯಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಲಿಲ್ಲ.

ಲುಮೆನ್ ಡೇಟಾಬೇಸ್‌ನಲ್ಲಿ ಪಟ್ಟಿ ಮಾಡಲಾದ ನಿರ್ಬಂಧಿಸಲಾದ URL ಗಳನ್ನು ಕ್ಲಿಕ್ ಮಾಡಿದ ನಂತರ, ಟ್ವೀಟ್ ಅನ್ನು "ಕಾನೂನಿಗನುಗುಣವಾಗಿ ಭಾರತದಲ್ಲಿ ತಡೆಹಿಡಿಯಲಾಗಿದೆ" ಎಂಬ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಮೂಲಗಳ ಪ್ರಕಾರ, ಈ ಟ್ವೀಟ್‌ಗಳಲ್ಲಿ ಮೇಲೆ ಹೇಳಲಾದ ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿದ ವಿಷಯವಿದೆ.

ಟ್ವಿಟ್ಟರ್ ವಕ್ತಾರರು : "ನಮ್ಮ ದೇಶದ ನೀತಿಯಲ್ಲಿ ವಿವರಿಸಿದಂತೆ, ಮಾನ್ಯ ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅಥವಾ ಸ್ಥಳೀಯ ಕಾನೂನು (ಗಳನ್ನು) ಉಲ್ಲಂಘಿಸುವ ವಿಷಯ ಕಂಡುಬಂದಾಗ ಕೆಲವು ವಿಷಯಗಳನ್ನು ತಡೆಹಿಡಿಯುವುದು ಅಗತ್ಯವಾಗಬಹುದು". ಎಂದರು. ತಡೆಹಿಡಿಯುವಿಕೆಯು ನಿರ್ದಿಷ್ಟ ನ್ಯಾಯವ್ಯಾಪ್ತಿ / ದೇಶಕ್ಕೆ ಸೀಮಿತವಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಖಾತೆದಾರರಿಗೆ ನೇರವಾಗಿ ಈ ಬಗ್ಗೆ ತಿಳಿಸಲಾಗುವುದು - ಲಭ್ಯವಿದ್ದರೆ ಖಾತೆ (ಗಳು) ಗೆ ಸಂಬಂಧಿಸಿದ ಇ-ಮೇಲ್ ವಿಳಾಸಕ್ಕೆ ಸಂದೇಶವನ್ನು ಕಳುಹಿಸುವ ಮೂಲಕ ಹೇಳಲಾಗುವುದು. ದರಿಂದಾಗಿ ಖಾತೆಗೆ ಸಂಬಂಧಿಸಿದ ಕಾನೂನು ಆದೇಶವನ್ನು ಟ್ವಿಟ್ಟರ್ ಸ್ವೀಕರಿಸಿದೆ ಎಂದು ಬಳಕೆದಾರರಿಗೆ ತಿಳಿದಿರುತ್ತದೆ. "ನಾವು ಸ್ವೀಕರಿಸುವ ಕಾನೂನು ವಿನಂತಿಗಳನ್ನು ದ್ವೈವಾರ್ಷಿಕ ಟ್ವಿಟರ್ ಪಾರದರ್ಶಕತೆ ವರದಿಯಲ್ಲಿ ವಿವರಿಸಲಾಗಿದೆ, ಮತ್ತು ವಿಷಯವನ್ನು ತಡೆಹಿಡಿಯುವ ವಿನಂತಿಗಳನ್ನು ಲುಮೆನ್‌ನಲ್ಲಿ ಪ್ರಕಟಿಸಲಾಗಿದೆ" ಎಂದು ವಕ್ತಾರರು ಹೇಳಿದರು.

ವಯಸ್ಸಾದ ಮುಸ್ಲಿಂ ವ್ಯಕ್ತಿಯನ್ನು 'ಜೈ ಶ್ರೀ ರಾಮ್' ಎಂದು ಜಪಿಸಲು ಕೇಳಿ ಥಳಿಸಲಾಗಿದೆ ಎಂದು ಹೇಳಿದ ವಿಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಘಾಜಿಯಾಬಾದ್ ಪೊಲೀಸರು ಟ್ವಿಟ್ಟರ್ ಮತ್ತು ಆರು ಜನರನ್ನು ಬುಕ್ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೇರ್ಪಡೆಗೊಳ್ಳುವಂತೆ ಘಾಜಿಯಾಬಾದ್ ಪೊಲೀಸರು ಟ್ವಿಟ್ಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. 

ಹೊಸ ಐಟಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲು ವಿಫಲವಾದ ಕಾರಣ ಟ್ವಿಟ್ಟರ್ ಭಾರತ ಸರ್ಕಾರದೊಂದಿಗೆ ಇದಾಗಲೇ ವಿವಾದಕ್ಕೆ ಸಿಕ್ಕಿಕೊಂಡಿದೆ. ಮೇ 26 ರಿಂದ ಈ ನಿಯಮಗಳು ಜಾರಿಗೆ ಬಂದರೂ, ಟ್ವಿಟರ್ ಸರ್ಕಾರದಿಂದ ಪದೇ ಪದೇ ಜ್ಞಾಪನೆಗಳನ್ನು ಸ್ವೀಕರಿಸಿದ್ದರೂ ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳನ್ನು ಪಾಲಿಸಲಿಲ್ಲ

ಸರ್ಕಾರ ಇತ್ತೀಚೆಗೆ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ ಟ್ವಿಟ್ಟರ್ ಭಾರತದಲ್ಲಿ ಅಂದಾಜು 1.75 ಕೋಟಿ ಬಳಕೆದಾರರನ್ನು ಹೊಂದಿದೆ.

SCROLL FOR NEXT