ದೇಶ

ಕೋವಿಡ್ 2ನೇ ಅಲೆಯಲ್ಲಿ ದೆಹಲಿ ಆಮ್ಲಜನಕದ ಬೇಡಿಕೆಯನ್ನು ಅಗತ್ಯಕ್ಕಿಂತ ಹೆಚ್ಚು ಬಿಂಬಿಸಿರಲಿಲ್ಲ: ಮನೀಶ್ ಸಿಸೋಡಿಯಾ

Vishwanath S

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಂದರ್ಭದಲ್ಲಿ ದೆಹಲಿ ಆಮ್ಲಜನಕವನ್ನು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬಿಂಬಿಸಿತ್ತು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ವರದಿಯಲ್ಲಿಲ್ಲ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸುಖಾಸುಮ್ಮನೆ ಅದರ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು. ನಾವು ಸುಪ್ರೀಂ ಕೋರ್ಟ್ ನ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರೊಂದಿಗೆ ಮಾತನಾಡಿದ್ದೇವೆ. ಅಂತಹ ಯಾವುದೇ ವರದಿಗೆ ಅವರು ಸಹಿ ಹಾಕಿಲ್ಲ ಅಥವಾ ಅನುಮೋದಿಸಿಲ್ಲ ಎಂದು ಹೇಳಿದರು ಎಂದರು. 

ಆದರೆ ಬಿಜೆಪಿ ತನ್ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಿದ್ಧಪಡಿಸಿದ ಸುಳ್ಳು ವರದಿಯನ್ನು ಮಂಡಿಸುತ್ತಿದೆ. ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರು ಸಹಿ ಮಾಡಿರುವ ಅಂತಹ ಯಾವುದೇ ವರದಿಯನ್ನು ಬಹಿರಂಗಪಡಿಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ ಎಂದು ಸಿಸೋಡಿಯಾ ಹೇಳಿದರು.

ಕೊರೋನಾ ಎರಡನೇ ಅಲೆ ದೆಹಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೆ ಅತಿಯಾದ ಆಮ್ಲಜನಕ ಕೊರತೆಯನ್ನು ಎದುರಿಸಿತ್ತು. ಆಮ್ಲಜನಕ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಇನ್ನು ಅವರು ನಿಜವಾಗಿ ಕೇಜ್ರಿವಾಲ್ ಅವರನ್ನು ನಿಂದಿಸುತ್ತಿಲ್ಲ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಿಸೋಡಿಯಾ ತಿಳಿಸಿದ್ದಾರೆ. 

SCROLL FOR NEXT