ದೇಶ

ಡೆಲ್ಟಾ ಪ್ಲಸ್ ರೂಪಾಂತರ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ- ಐಸಿಎಂಆರ್ ತಜ್ಞ

Nagaraja AB

ನವದೆಹಲಿ: ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಮಿರನ್ ಪಾಂಡ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧ ಲಭ್ಯವಿರುವ ಕೋವಿಡ್-19 ಲಸಿಕೆಯ ಪರಿಣಾಮಕಾರಿತ್ವ ಕುರಿತು ಅಧ್ಯಯನ ನಡೆಸಲಾಗಿದ್ದು, ಇದನ್ನು ಭಾರತದ ಹಲವಾರು ಭಾಗಗಳಲ್ಲಿ ಪತ್ತೆಹಚ್ಚಿದ ನಂತರ ರೂಪಾಂತರದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.  

ಕೋವಿಡ್ ಎರಡನೇಯ ಅಲೆಯಷ್ಟು ಮೂರನೇ ಅಲೆ ತೀವ್ರವಾಗಿರುವುದಿಲ್ಲ ಎಂದು ಡಾ. ಸಮಿರನ್ ಪಾಂಡ ಹೇಳಿದ್ದಾರೆ. ಏಪ್ರಿಲ್- ಮೇ ನಲ್ಲಿ ದೇಶಾದ್ಯಂತ ಎರಡನೇ ಅಲೆ ತೀವ್ರ ರೀತಿಯ ಪರಿಣಾಮ ಬೀರಿತ್ತು.

ಡೆಲ್ಟ್ ಪ್ಲಸ್ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸಲಹೆ ನೀಡಿರುವ ಡಾ. ಸಮಿರನ್ ಪಾಂಡ, ಲಸಿಕಾ ಅಭಿಮಾನವನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಮುಂದಿನ ಅಲೆ ನಿಯಂತ್ರಿಸಲು ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

SCROLL FOR NEXT