ದೇಶ

ಕೋವಿಡ್-19 ಲಸಿಕೆ: ಅಮೆರಿಕವನ್ನು ಹಿಂದಿಕ್ಕಿದ ಭಾರತ; 32 ಕೋಟಿಗೂ ಹೆಚ್ಚು ಡೋಸ್ ವಿತರಣೆ!

Srinivasamurthy VN

ನವದೆಹಲಿ: ಜಗತ್ತಿನ ಅತೀ ದೊಡ್ಡ ಲಸಿಕಾ ಅಭಿಯಾನವೆಂದೇ ಖ್ಯಾತಿ ಗಳಿಸಿದ್ದ ಭಾರತದ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಮುಂದುವರೆದಿದ್ದು, ಇದೀಗ ಲಸಿಕೆ ವಿತರಣೆಯಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಿದೆ.

ಹೌದು..ಅತೀ ಕಡಿಮೆ ಸಮಯದಲ್ಲಿ ಭಾರತ ಹೆಚ್ಚಿನ ಪ್ರಮಾಣದ ಲಸಿಕೆ ವಿತರಣೆ ಮಾಡಿದ್ದು, ಆ ಮೂಲಕ ಅಮೆರಿಕದ ಸಾಧನೆಯನ್ನು ಹಿಂದಿಕ್ಕಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತ 32,36,63,297 ಡೋಸ್‌ಗಳನ್ನು ನೀಡಿದ್ದರೆ, ಅಮೆರಿಕ 32,33,27,328 ಡೋಸ್  ಲಸಿಕೆಗಳನ್ನು ನೀಡಿದೆ.

ಭಾರತಕ್ಕಿಂತ ಮೊದಲೇ ಲಸಿಕೆ ಅಭಿಯಾನ ಆರಂಭಿಸಿದ್ದ ಅಮೆರಿಕ
ಇನ್ನೂ ವಿಶೇಷವೆಂದರೆ, ಅಮೆರಿಕ ಭಾರತಕ್ಕಿಂತ ಮೊದಲೇ ಲಸಿಕೆ ಅಭಿಯಾನ ಆರಂಭಿಸಿತ್ತು. ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಈ ವರ್ಷದ ಜನವರಿ 16 ರಿಂದ ಪ್ರಾರಂಭವಾಗಿದ್ದರೆ, ಅಮೆರಿಕ ಕಳೆದ ವರ್ಷದ ಡಿಸೆಂಬರ್ 14 ರಿಂದಲೇ ಲಸಿಕೆ ನೀಡಿಕೆ ಶುರುವಾಗಿತ್ತು.

ಜೂನ್ 27 ರಂದು ಭಾರತದಲ್ಲಿ 17.21 ಲಕ್ಷಕ್ಕೂ  ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ತಾತ್ಕಾಲಿಕ ವರದಿ ಹೇಳಲಾಗಿತ್ತು. ಜೂನ್ 27 ರಂದು ವ್ಯಾಕ್ಸಿನೇಷನ್ ಕಾರ್ಯಕ್ರಮದ 163 ನೇ ದಿನದಂದು, 13.9 ಲಕ್ಷ ಫಲಾನುಭವಿಗಳು ತಮ್ಮ ಮೊದಲ ಡೋಸ್ ಮತ್ತು 3.3 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ  ನೀಡಲಾಗಿತ್ತು ಎಂದು ಹೇಳಲಾಗಿದೆ. 
 

SCROLL FOR NEXT