ದೇಶ

ಎಐಎಡಿಎಂಕೆ ಮಾಜಿ ಸಚಿವ ಸಿವಿ ಷಣ್ಮುಗಂಗೆ ಕೊಲೆ ಬೆದರಿಕೆ: ವಿಕೆ ಶಶಿಕಲಾ ವಿರುದ್ಧ ಎಫ್‌ಐಆರ್

Vishwanath S

ಚೆನ್ನೈ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಮುಖಂಡೆ ವಿಕೆ ಶಶಿಕಲಾ ಮತ್ತು ಅವರ ಬೆಂಬಲಿಗರ ವಿರುದ್ಧ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ರೋಶಾನಾಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

ಎಐಎಡಿಎಂಕೆ ಮಾಜಿ ಸಚಿವ ಸಿವಿ ಷಣ್ಮುಗಂಗೆ ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಫೋನ್‌ ಮೂಲಕ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) 109ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 

ತಮಿಳುನಾಡಿನ ಮಾಜಿ ಸಚಿವ ಷಣ್ಮುಗಂ ಅವರನ್ನು ಬೆದರಿಸಿದ ಆರೋಪದ ಮೇಲೆ ಶಶಿಕಲಾ ಮತ್ತು 501 ಬೆಂಬಲಿಗರು ಸೇರಿದಂತೆ ಪ್ರಕರಣಗಳು ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

ಶಶಿಕಲಾ ಪಿಎ ಕಾರ್ತಿಕೇಯನ್ ಕಳುಹಿಸಿದ ಆಡಿಯೊ ಕ್ಲಿಪ್‌ನಲ್ಲಿ ಮಾಜಿ ಶಾಸಕ ಕದಿರ್ಕಮು ಅವರೊಂದಿಗಿನ ಸಂವಾದದಲ್ಲಿ ತನ್ನ ಮತ್ತು ಪಕ್ಷದ ವಿರುದ್ಧ ದಂಗೆ ಎದ್ದ ಕಾರಣಕ್ಕಾಗಿ ಮಾಜಿ ಸಿಎಂ ಒ ಪನ್ನೀರ್‌ಸೆಲ್ವಂ ಮತ್ತು ಇತರ ಹತ್ತು ಶಾಸಕರನ್ನು ಅನರ್ಹಗೊಳಿಸದಂತೆ ಪಕ್ಷಕ್ಕೆ ಸೂಚನೆ ನೀಡಿದ್ದೇನೆ ಎಂದು ಶಶಿಕಲಾ ಹೇಳಿಕೊಂಡಿದ್ದಾರೆ.

ಶಶಿಕಲಾ ಅವರ ಮತ್ತೊಂದು ಆಡಿಯೊ ಕ್ಲಿಪ್ ಹೊರಬಂದಿದ್ದು ಶಶಿಕಲಾ ಅನರ್ಹ ಮೂವರು ಶಾಸಕರೊಂದಿಗೆ ಮಾತನಾಡಿದ್ದಾರೆ. ಅದರಲ್ಲಿ ಪನ್ನೀರ್‌ಸೆಲ್ವಂ ಸೇರಿದಂತೆ 11 ಶಾಸಕರ ಅನರ್ಹತೆಯನ್ನು ತಡೆದದ್ದು ತಾನು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತದನಂತರ ಪನ್ನೀರ್ ಸೆಲ್ವಂ ಮತ್ತು ಮಾಜಿ ಸಿಎಂ ಎಡಪಡ್ಡಿ ಕೆ ಪಳನಿಸ್ವಾಮಿ ಒಟ್ಟಾಗಿ ನಂತರ ಅವರು 18 ಶಾಸಕರನ್ನು ಪಕ್ಷದಿಂದ ಅನರ್ಹಗೊಳಿಸಿದರು ಎಂದು ಮಾತನಾಡಿದ್ದಾರೆ. 

SCROLL FOR NEXT