ಜಮ್ಮು-ಕಾಶ್ಮೀರದ ವಾಯುನೆಲೆ 
ದೇಶ

ಜಮ್ಮುವಿನ ಕಲುಚಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋನ್ ಗಳ ಪತ್ತೆ: ಪರಿಶೀಲನೆ ಮುಂದುವರಿಕೆ 

ಜಮ್ಮು-ಕಾಶ್ಮೀರದ ವಾಯುಪಡೆ ನೆಲೆಯಲ್ಲಿ ಸ್ಫೋಟ ಸಂಭವಿಸಿದ ಮೂರು ದಿನಗಳ ನಂತರ ಬುಧವಾರ ಬೆಳಗಿನ ಜಾವ ಕಲುಚಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋನ್ ಗಳ ಪತ್ತೆಯಾಗಿದೆ.

ಜಮ್ಮು: ಜಮ್ಮು-ಕಾಶ್ಮೀರದ ವಾಯುಪಡೆ ನೆಲೆಯಲ್ಲಿ ಸ್ಫೋಟ ಸಂಭವಿಸಿದ ಮೂರು ದಿನಗಳ ನಂತರ ಬುಧವಾರ ಬೆಳಗಿನ ಜಾವ ಕಲುಚಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋನ್ ಗಳ ಪತ್ತೆಯಾಗಿದೆ.

ಪ್ರಮುಖ ಕೇಂದ್ರಗಳನ್ನು ಕೆಡವಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ಡ್ರೋನ್‌ಗಳನ್ನು ನಿಯೋಜಿಸಿದ ಮೊದಲ ಉದಾಹರಣೆಯಲ್ಲಿ ಕಳೆದ ಭಾನುವಾರ ಬೆಳಗಿನ ಜಾಲ ಜಮ್ಮುವಿನ ಭಾರತೀಯ ವಾಯುಪಡೆಯ ನೆಲೆಯಲ್ಲಿ ಎರಡು ಬಾಂಬ್ ಗಳನ್ನು ಬೀಳಿಸಿದ್ದರು.

ಈ ಬಾಂಬ್ ದಾಳಿಯ ಹಿಂದೆ ನಿಷೇಧಿತ ಲಷ್ಕರ್ ಇ ತೈಬಾ ಉಗ್ರಗಾಮಿ ಸಂಘಟನೆ ಇರಬಹುದೆಂದು ಶಂಕಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಕಳೆದ ಭಾನುವಾರ ಮಧ್ಯರಾತ್ರಿ 1.40 ರ ಸುಮಾರಿಗೆ ಪರಸ್ಪರ ಆರು ನಿಮಿಷಗಳಲ್ಲಿ ಜಮ್ಮು-ಕಾಶ್ಮೀರದ ವಾಯುಪಡೆ ನೆಲೆ ಬಳಿ ಎರಡು ಸ್ಫೋಟಗಳು ನಡೆದವು. ಮೊದಲ ಸ್ಫೋಟವು ನಗರದ ಹೊರವಲಯದಲ್ಲಿರುವ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಒಂದೇ ಅಂತಸ್ತಿನ ಕಟ್ಟಡದ ಛಾವಣಿಗೆ ಹಾನಿಗೀಡು ಮಾಡಿದೆ.

ಎರಡನೆಯದು ನೆಲದ ಮೇಲೆ ಸ್ಫೋಟವಾಗಿತ್ತು. ಡ್ರೋನ್‌ಗಳು ಬಿಟ್ಟ ಸ್ಫೋಟಕ ವಸ್ತುಗಳನ್ನು ಆರ್‌ಡಿಎಕ್ಸ್ ಒಳಗೊಂಡಿರುವ ಕಾಕ್ಟೈಲ್ ಬಳಸಿ ತಯಾರಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದು ಅದಿನ್ನೂ ದೃಢಪಟ್ಟಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT