ದೇಶ

ಆಮ್ಲಜನಕ ಕೊರತೆ: ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಓರ್ವ ವೈದ್ಯ ಸೇರಿ 8 ಮಂದಿ ಸಾವು

Raghavendra Adiga

ನವದೆಹಲಿ: ಸುಮಾರು ಒಂದು ಗಂಟೆ ಕಾಲ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಓರ್ವ ವೈದ್ಯರೂ ಸೇರಿ 8 ಕೋವಿಡ್-19 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ದೆಹಲಿಯ ಬಾತ್ರಾ ಆಸ್ಪತ್ರೆ ಶನಿವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಬಾತ್ರಾ ಆಸ್ಪತ್ರೆ ಹೈಕೋರ್ಟ್‌ಗೆ "ನಾವು ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪಡೆಯಲಿಲ್ಲ. ಮಧ್ಯಾಹ್ನ 12 ಗಂಟೆಗೆ ನಾವು ಆಮ್ಲಜನಕ ಪೂರೈಕೆಯ ವ್ಯತ್ಯಯ ಎದುರಿಸಿದ್ದೆವು. ಮಧ್ಯಾಹ್ನ 1:35 ಕ್ಕೆ ನಮಗೆ ಆಮ್ಲಜನಕ ಸಿಕ್ಕಿತು. ಈ ನಡುವೆ ನಮ್ಮ ಒಬ್ಬ ವೈದ್ಯ ಸೇರಿದಂತೆ ಎಂಟು ಮಂದಿ ರೋಗಿಗಳು ಪ್ರಾಣ ಕಳೆದುಕೊಂಡರು" ಎಂದು ತಿಳಿಸಿದೆ.

"ನಾವು ಆಮ್ಲಜನಕ ಪೂರೈಕೆಯಿಲ್ಲದೆ ಸುಮಾರು ಒಂದು ಗಂಟೆ ನಮ್ಮ ಕಾರ್ಯಾಚರಣೆಯನ್ನು ನಡೆಸಿದ್ದೇವೆ" ಎಂದು ಬಾತ್ರಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್ಸಿಎಲ್ ಗುಪ್ತಾ ಹೇಳಿದರು.

ಎಸ್‌ಒಎಸ್ ಸಂದೇಶವೊಂದರಲ್ಲಿ, ಬಾತ್ರಾ ಆಸ್ಪತ್ರೆ ಈ ಹಿಂದೆ "ಆಮ್ಲಜನಕವು ಇನ್ನೂ 10 ನಿಮಿಷಗಳ ಕಾಲ ಮಾತ್ರವೇ ಇರುತ್ತದೆ. ಈ ಆಸ್ಪತ್ರೆಯಲ್ಲಿ 326 ರೋಗಿಗಳನ್ನು ದಾಖಲಿಸಲಾಗಿದೆ" ಎಂದು ಹೇಳಿತ್ತು. 

SCROLL FOR NEXT