ದೇಶ

ಪುದುಚೆರಿ: ಬಿಜೆಪಿಯಿಂದ ಸ್ಪರ್ಧಿಸಿದ್ದ ತಂದೆ-ಮಗನಿಗೆ ಗೆಲುವು

Srinivas Rao BV

ಪುದುಚೆರಿ: ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ತಂದೆ ಹಾಗೂ ಮಗ ಇಬ್ಬರೂ ಪುದುಚೆರಿಯಲ್ಲಿ ಗೆಲುವು ಸಾಧಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿಗಳಾದ ಎ ಜಾನ್ ಕುಮಾರ್ ಹಾಗೂ ಅವರ ಪುತ್ರ ರಿಚರ್ಡ್ ಜಾನ್ ಕುಮಾರ್ ಗೆಲುವು ಸಾಧಿಸಿರುವ ಅಭ್ಯರ್ಥಿಗಳಾಗಿದ್ದಾರೆ. 

ಎ ಜಾನ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುವುದಕ್ಕೂ ಮುನ್ನ ಕಾಂಗ್ರೆಸ್ ನಲ್ಲಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೇರಿ ಕಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಎದುರಾಳಿ ಕಾಂಗ್ರೆಸ್ ಪಕ್ಷದ ಎಂ.ಒ.ಹೆಚ್.ಎಫ್ ಶಾಜಹಾನ್ ಅವರನ್ನು 7,229 ಮತಗಳಿಂದ ಸೋಲಿಸಿದ್ದಾರೆ. ಅವರ ಪುತ್ರ ರಿಚರ್ಡ್, ನೆಲ್ಲಿಥೋಪ್ ಕ್ಷೇತ್ರದಿಂದ ಸ್ಪರ್ಧಿಸಿ ಡಿಎಂಕೆ ಅಭ್ಯರ್ಥಿಯನ್ನು 496 ಮತಗಳಿಂದ ಸೋಲಿಸಿದ್ದಾರೆ.

SCROLL FOR NEXT