ದೇಶ

ದಿನದಿಂದ ದಿನಕ್ಕೆ ಕೊರೋನಾ ಸೋಂಕು ಏರಿಕೆ: ಲಾಕ್ ಡೌನ್ ಹೇರಿಕೆಗೆ ಹೆಚ್ಚುತ್ತಿರುವ ಒತ್ತಡ!

Sumana Upadhyaya

ನವದೆಹಲಿ: ಕೊರೋನಾ ವೈರಸ್ ಹರಡುವುದನ್ನು ತಡೆಯಲು ಸೋಂಕಿನ ಕೊಂಡಿಯನ್ನು ಕತ್ತರಿಸಲು ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಒಂದೇ ಏಕೈಕ ಪರಿಹಾರ ಎಂದು ಸಿಐಐ ಅಧ್ಯಕ್ಷ ಉದಯ್ ಕೊಟಾಕ್ ಕರೆ ನೀಡಿದ ಬಳಿಕ ಕಾರ್ಪೊರೇಟ್ ಜಗತ್ತಿನ ಹಲವು ನಾಯಕರು ಅವರ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ಆರ್ಥಿಕ ಹೊಡೆತವಾದರೂ ಸರಿ ಜನರ ಜೀವ ಕಾಪಾಡಲು ಲಾಕ್ ಡೌನ್ ಮಾಡುವುದೇ ಉತ್ತಮ ಎನ್ನುತ್ತಿದ್ದಾರೆ. ಆದರೆ ಈ ಹಂತದಲ್ಲಿ ಲಾಕ್ ಡೌನ್ ಅಷ್ಟೊಂದು ಪರಿಣಾಮ ಬೀರಲಿಕ್ಕಿಲ್ಲ ಎಂಬುದು ಆರೋಗ್ಯ ತಜ್ಞರ ಅಭಿಮತ. ಆರೋಗ್ಯ ತಜ್ಞರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ.

ಕಾರ್ಪೊರೇಟ್ ಜಗತ್ತಿನ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೊಸಿಸ್, ಮಾರುತಿ ಸುಜುಕಿ, ಹೀರೋ ಮೋಟೊಕಾರ್ಪ್, ಮಹೀಂದ್ರ ಅಂಡ್ ಮಹೀಂದ್ರ, ಜೆಸಿಬಿ ಮತ್ತು ಕೊಟಾಕ್ ಮಹೀಂದ್ರಾ ಬ್ಯಾಂಕ್ ತಮ್ಮ ನೌಕರರ ಸುರಕ್ಷತೆಗೆ ಈಗಾಗಲೇ ತಮ್ಮದೇ ಆದ ಹಲವು ಕ್ರಮಗಳನ್ನು ಕೈಗೊಂಡಿವೆ.

ಸೇವಾ ವಲಯ ಸಂಸ್ಥೆಗಳು ಮನೆಯಿಂದಲೇ ನೌಕರರಿಗೆ ಕೆಲಸ ಮಾಡುವ ಸೌಲಭ್ಯವನ್ನು ನೀಡಿದರೆ ಉತ್ಪಾದಕ ವಲಯಗಳು ಉತ್ಪಾದನೆಯನ್ನು ನಿಲ್ಲಿಸಿದ್ದು, ನಿರ್ವಹಣಾ ಸಮಯವನ್ನು ಹೆಚ್ಚಿಸಿಕೊಂಡಿವೆ. ಸ್ಟೀಲ್ ಉತ್ಪಾದನೆಗಿಂತ ನೌಕರರ ಪ್ರಾಣ ರಕ್ಷಣೆ ನಮಗೆ ಮುಖ್ಯ, ಕಂಪೆನಿಯಿಂದ ಉತ್ಪಾದನೆಯಾಗುವ ವಸ್ತುಗಳು ನಿಂತರೆ ಖಂಡಿತಾ ದೇಶಕ್ಕೆ ನಷ್ಟವಾಗುತ್ತದೆ ಎನ್ನುತ್ತಾರೆ ಜೆಎಸ್ ಡಬ್ಲ್ಯು ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್. ಇದು ಆಸ್ಪತ್ರೆಗಳಿಗೆ ದ್ರವ ಆಕ್ಸಿಜನ್ ಪೂರೈಸುತ್ತದೆ.

ಮತ್ತೊಬ್ಬ ಕಾರ್ಪೊರೇಟ್ ಜಗತ್ತಿನ ನಾಯಕ, ಭಾರತದ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಎರಡು ವಾರಗಳ ಕಾಲ ಅಗತ್ಯೇತರ ವ್ಯವಹಾರ ಚಟುವಟಿಕೆಗಳನ್ನು ರದ್ದುಪಡಿಸಿ ಸಂಪೂರ್ಣ ಲಾಕ್ ಡೌನ್ ಮಾಡಬೇಕು ಎನ್ನುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮಿ ನಿರಂಜನ್ ಹಿರನಂದನಿ ಸಮತೋಲಿತ ಹೇಳಿಕೆ ನೀಡುತ್ತಾರೆ.

SCROLL FOR NEXT