ದೇಶ

ವಾಯುಯಾನ ಸಿಬ್ಬಂದಿಗೆ ತ್ವರಿತಗತಿಯಲ್ಲಿ ಕೋವಿಡ್-19 ಲಸಿಕೆಗಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Nagaraja AB

ನವದೆಹಲಿ: ಸಾರ್ವಜನಿಕ ಹಾಗೂ ಖಾಸಗಿ ವಾಯುಯಾನ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತ್ವರಿತಗತಿಯಲ್ಲಿ ಕೋವಿಡ್-19 ಲಸಿಕೆ ಸೌಕರ್ಯಕ್ಕಾಗಿ ಕೇಂದ್ರ ಸರ್ಕಾರ ಗುರುವಾರ ಮಾರ್ಗಸೂಚಿ ಪ್ರಕಟಿಸಿದೆ.

ಸಿಬ್ಬಂದಿಗೆ ತ್ವರಿತಗತಿಯಲ್ಲಿ ಲಸಿಕೆ ನೀಡಲು ಅನುಕೂಲವಾಗುವಂತೆ ಆಯಾ ವಿಮಾನ ನಿಲ್ದಾಣಗಳಲ್ಲಿ ಏರ್ ಪೋರ್ಟ್ ಆಪರೇಟರ್ ಗಳು ಲಸಿಕೆ ಸೌಲಭ್ಯವನ್ನು ಒದಗಿಸಬೇಕೆಂದು ನಾಗರಿಕ ವಿಮಾನಯಾನ ಸಚಿವಾಲಯದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ಲಸಿಕೆ ನೀಡುವಾಗ ಏರ್ ಟ್ರಾಫಿಕ್ ಕಂಟ್ರೋಲರ್, ಕಾಕ್ ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿಗೆ  ಆದ್ಯತೆ ನೀಡುವಂತೆಯೂ ಸೂಚಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಕೋವಿಡ್-19 ಲಸಿಕಾ ಕೇಂದ್ರ ಸ್ಥಾಪಿಸಲು ಇಟ್ಟಿಸುವ ಖಾಸಗಿ ಕ್ಷೇತ್ರದ ಆಸ್ಪತ್ರೆಗಳು ಅಥವಾ ರಾಜ್ಯ ಸರ್ಕಾರವನ್ನು ಕೂಡಲೇ ಸಂಪರ್ಕಿಸುವಂತೆ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸೂಚಿಸಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಕುಡಿಯುವ ನೀರು, ಹೆಲ್ಫ್ ಡೆಸ್ಕ್, ವೆಂಟಿಲೇಷನ್, ಫ್ಯಾನ್, ವಾಶ್ ರೂಮ್, ವ್ಯಾಕ್ಸಿನೇಷನ್ ಕೌಂಟರ್ ಗಳನ್ನು ಮತ್ತು ಪ್ರತ್ಯೇಕ ಕಾಯುವ ಪ್ರದೇಶ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕು, ಲಸಿಕೆ ಪೂರೈಸುವ ಸಂಸ್ಥೆಗಳೊಂದಿಗೆ
ಚರ್ಚಿಸಿ ಲಸಿಕೆಗೆ ದರವನ್ನು ವಿಮಾನ ನಿಲ್ದಾಣದ ಆಪರೇಟರುಗಳು ನಿಗದಿಪಡಿಸಬಹುದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

SCROLL FOR NEXT