ದೇಶ

ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಐಐಟಿ ಬಾಂಬೆ ಭಾರತದ ಅಗ್ರ ಸಂಸ್ಥೆ, ಐಐಎಸ್ ಸಿ ಬೆಂಗಳೂರಿಗೂ ಸ್ಥಾನ

Lingaraj Badiger

ನವದೆಹಲಿ: ಜಾಗತಿಕ ಉನ್ನತ ಶಿಕ್ಷಣ ಸಲಹಾ ಕ್ವಾಕ್ವೆರೆಲ್ಲಿ ಸೈಮಂಡ್ಸ್(ಕ್ಯೂಎಸ್) ಸಿದ್ಧಪಡಿಸಿದ ಉನ್ನತ ವಿಶ್ವವಿದ್ಯಾಲಯಗಳ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಐಐಟಿ ಬಾಂಬೆ ಭಾರತದಲ್ಲಿ ಅಗ್ರ ಸ್ಥಾನ ಪಡೆದಿದೆ.

ಐಐಟಿ-ಬಾಂಬೆ ಜಾಗತಿಕ ಶ್ರೇಯಾಂಕದಲ್ಲಿ 172ನೇ ಸ್ಥಾನ ಪಡೆಯುವ ಮೂಲಕ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ್ದು, 2021ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಕಳೆದ ಸಲಕ್ಕಿಂತ 20 ಸ್ಥಾನಗಳನ್ನು ಹೆಚ್ಚಿಗೆ ಪಡೆದಿದೆ.

ಐಐಎಸ್ ಸಿ ಬೆಂಗಳೂರು 185ನೇ ಸ್ಥಾನ, ಐಐಟಿ-ದೆಹಲಿ 193ನೇ ಸ್ಥಾನ ಪಡೆದರೆ, ಐಐಟಿ ಮದ್ರಾಸ್ 275, ಐಐಟಿ ಖರಗ್ ಪುರ 314ನೇ ಹಾಗೂ ಐಐಟಿ ಕಾನ್ಪುರ್ 350ನೇ ಸ್ಥಾನ ಪಡೆದಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿ(ಐಐಟಿಆರ್) ಕಳೆದ ವರ್ಷದ 383 ನೇ ಸ್ಥಾನವನ್ನು ಉಳಿಸಿಕೊಂಡ ಏಕೈಕ ಸಂಸ್ಥೆಯಾಗಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ (ಐಐಟಿಜಿ) ಈ ಬಾರಿ ತನ್ನ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದು, 470ನೇ ಸ್ಥಾನ ಪಡೆದಿದೆ.

ಜಾಗತಿಕವಾಗಿ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ನಂತರ ಸ್ಟ್ಯಾಂಡ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯವು ವಿಶ್ವದ ಮೂರು ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಾಗಿವೆ.

SCROLL FOR NEXT