ದೇಶ

ಇದೆಂಥಾ ದುಸ್ಥಿತಿ?! ವೆಂಟಿಲೇಟರ್ ಸಿಕ್ಕದೆ ಕೋವಿಡ್ ಸೋಂಕಿತ ಎನ್‌ಎಸ್‌ಜಿ ಅಧಿಕಾರಿ ಸಾವು

Raghavendra Adiga

ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಆಸ್ಪತ್ರೆಯಲ್ಲಿ ಸಮಯಕ್ಕೆ ವೆಂಟಿಲೇಟರ್ ಸಿಕ್ಕದ ಪರಿಣಾಮ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಅಧಿಕಾರಿಯೊಬ್ಬರು ಕೋವಿಡ್ -19 ಸೋಂಕಿನಿಂದ ಬುಧವಾರ ಮೃತಪಟ್ಟರು.

ಗ್ರೂಪ್ ಕಮಾಂಡರ್ (ಕೋ ಆರ್ಡಿನೇಶನ್)ಬಿ ಕೆ ಝಾ(53) ಹೃದಯ ಸ್ತಂಭನದ ನಂತರ ಬುಧವಾರ ಮುಂಜಾನೆ ನಿಧನರಾದರು ಎಂದು ತಿಳಿದುಬಂದಿದೆ. ಕೋವಿಡ್ -19 ಗೆ ಪಾಸಿಟಿವ್ ವರದಿ ಪಡೆದಿದ್ದ ನಂತರ ಝಾ ಅವರನ್ನು ಗ್ರೇಟರ್ ನೋಯ್ಡಾದ ಸಿಎಪಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆಲವು ದಿನಗಳ ಹಿಂದೆ ಝಾ ಅವರನ್ನು ದಾಖಲಿಸಲಾಯಿತು ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು ಮತ್ತು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಸಿಎಪಿಎಫ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದಂತೆ “ಅವರು ಆರಂಭದಲ್ಲಿ ಆಮ್ಲಜನಕದ ಬೆಂಬಲ ಪಡೆದಿದ್ದರು. ನಂತರ ಅವರನ್ನು ಬಿಪಿಎಪಿಗೆ ಸೇರಿಸಲಾಯಿತು, ಇದು ವೆಂಟಿಲೇಟರ್‌ ಗಿಂತ ತುಸು ಕಡಿಮೆ ಅವಕಾಶವಾಗಿದೆ.ಆದರೆ, ಮಂಗಳವಾರ ತಡರಾತ್ರಿ ಅವರ ಸ್ಥಿತಿ ಹಠಾತ್ತನೆ ಗಂಭೀರವಾಗಿತ್ತು.ವೈದ್ಯರಿಂದ ಅವರನ್ನು ಉಳಿಸಲು ಆಗಲಿಲ್ಲ, ವಿಶೇಷ ಚಿಕಿತ್ಸೆಗೆ ಅವರನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದ್ದರೂ ಅಲ್ಲಿಗೆ ತಲುಪುವ ಮುನ್ನ ಅವರ ಪ್ರಾಣ ಹೋಗಿತ್ತು."

ಸಿಎಪಿಎಫ್ ಆಸ್ಪತ್ರೆಯಲ್ಲಿ ಐಸಿಯು ವೆಂಟಿಲೇಟರ್‌ಗಳಲ್ಲಿ ಕೆಲವು ಸಮಸ್ಯೆಗಳಿವೆ ಮತ್ತು ಅಧಿಕಾರಿಗಳಿಗೆ ಅದರ ಅರಿವು ಇದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲು ಮತ್ತು ನಂತರ ಝಾ ಅವರನ್ನು  ವರ್ಗಾಯಿಸಲು ಹಾರ್ಟ್ ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡುವಲ್ಲಿ ಸಮಯ ವ್ಯಯವಾಗಿದೆ.ಎನ್‌ಎಸ್‌ಜಿ ಕಾರ್ಡಿಯಾಕ್ ಆಂಬ್ಯುಲೆನ್ಸ್ ಬಂದು ಝಾ ಅವರನ್ನು ಆಂಬ್ಯುಲೆನ್ಸ್‌ಗೆ ವರ್ಗಾಯಿಸುವ ಹೊತ್ತಿಗೆ ಅವರು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ದೇಶದ ಪ್ರಧಾನ ಭಯೋತ್ಪಾದನಾ ನಿಗ್ರಹ ಪಡೆ ಎನ್‌ಎಸ್‌ಜಿಯಲ್ಲಿ ಕೊರೋನಾವೈರಸ್ ನಿಂದ ಸಂಭವಿಸಿದ ಮೊದಲ ಸಾವಿನ ಪ್ರಕರಣ ಇದಾಗಿದೆ.  ಬಿಎಸ್ಎಫ್ ಕೇಡರ್ನ 1993 ರ ಬ್ಯಾಚ್ ಅಧಿಕಾರಿಯಾಗಿದ್ದ ಝಾ ಬಿಹಾರದಿಂದ ಬಂದರು. ಅವರು 2018 ರಲ್ಲಿ ಬಿಎಸ್ಎಫ್ನಿಂದ ಡೆಪ್ಯುಟೇಶನ್ ಮೇಲೆ  ಎನ್‌ಎಸ್‌ಜಿ ಸೇರಿದರು ಮತ್ತು ಈ ಮೊದಲು ಬಿಎಸ್ಎಫ್ ಮಹಾನಿರ್ದೇಶಕರಿಗೆ ಪ್ರಧಾನ ಸಿಬ್ಬಂದಿ ಅಧಿಕಾರಿ ಮತ್ತು ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು.

SCROLL FOR NEXT