ದೇಶ

ರಾಜ್ಯಗಳಲ್ಲಿ ಇನ್ನೂ 89 ಲಕ್ಷ ಡೋಸ್ ಕೋವಿಡ್ ಲಸಿಕೆಗಳು ಲಭ್ಯವಿದೆ: ಕೇಂದ್ರ ಆರೋಗ್ಯ ಸಚಿವಾಲಯ

Lingaraj Badiger

ನವದೆಹಲಿ: ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಕೊರತೆಯಾಗಿದೆ ಎಂಬ ವದಂತಿಯನ್ನು ತಳ್ಳಿ ಹಾಕಿರುವ ಕೇಂದ್ರ ಆರೋಗ್ಯ
ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಲ್ಲಿ ಇನ್ನೂ 89,31,505 ಡೋಸ್ ಕೋವಿಡ್ -19 ಲಸಿಕೆ ಲಭ್ಯವಿದೆ
ಎಂದು  ಗುರುವಾರ ಹೇಳಿದೆ.

ಮುಂದಿನ ಮೂರು ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 28 ಲಕ್ಷಕ್ಕೂ ಹೆಚ್ಚಿನ ಡೋಸ್‌ ಲಸಿಕೆ ಪೂರೈಸಲಾಗುವುದು ಎಂದು ಸಹ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೇಂದ್ರವು ರಾಜ್ಯಗಳಿಗೆ ಈವರೆಗೆ 17,15,42,410 ಉಚಿತ ಲಸಿಕೆಗಳನ್ನು ನೀಡಿದೆ. ಇದರಲ್ಲಿ, ಲಸಿಕೆ ವ್ಯರ್ಥವಾಗಿರುವುದನ್ನು ಹೊರತುಪಡಿಸಿ, ಒಟ್ಟು 16,26,10,905 ಡೋಸ್‌ ಬಳಕೆಯಾಗಿವೆ.

ಏತನ್ಮಧ್ಯೆ, ದೇಶದಲ್ಲಿ ಇಲ್ಲಿಯವರೆಗೆ 16,24,30,828 ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯಗಳು ಮತ್ತು ಪ್ರದೇಶಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರವು 'ಸಂಪೂರ್ಣ ಸರ್ಕಾರ' ವಿಧಾನದ ಮೂಲಕ ಮುನ್ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

SCROLL FOR NEXT