ದೇಶ

ಚುನಾವಣಾ ಆಯೋಗದ ಕಾರ್ಯನಿರ್ವಹಣೆಗೆ ಅಸಮಾಧಾನ: ಆಯೋಗದ ಸಮಿತಿಯಲ್ಲಿದ್ದ ವಕೀಲ 'ಗುಡ್ ಬೈ'

Nagaraja AB

ನವದೆಹಲಿ: ಸುಪ್ರೀಂ ಕೋರ್ಟ್ ಮುಂದೆ ಚುನಾವಣಾ ಆಯೋಗವನ್ನು ಪ್ರತಿನಿಧಿಸುತ್ತಿದ್ದ ವಕೀಲರೊಬ್ಬರು ಚುನಾವಣಾ ಆಯೋಗದ ವಕೀಲರ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

ಪ್ರಸ್ತುತದಲ್ಲಿ ನನ್ನ ಮೌಲ್ಯಗಳು ಚುನಾವಣಾ ಆಯೋಗದ ಕಾರ್ಯನಿರ್ವಹಣೆಯೊಂದಿಗೆ ಸರಿಯಾಗಿ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ವಕೀಲ ಮೋಹಿತ್ ಡಿ ರಾಮ್ 2013ರಿಂದಲೂ ಸುಪ್ರೀಂ ಕೋರ್ಟ್ ನಲ್ಲಿ ಚುನಾವಣಾ ಆಯೋಗದ ಸಮಿತಿ ಪರ ಪ್ರತಿನಿಧಿಸುತ್ತಿದ್ದರು.

ಪ್ರಸ್ತುತದಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯೊಂದಿಗೆ ನನ್ನ ಮೌಲ್ಯಗಳು ಸರಿಯಾಗಿ ಹೊಂದಾಣಿಕೆಯಾಗದಿರುವುದನ್ನು ಕಂಡುಕೊಂಡೆ ಅದಕ್ಕಾಗಿ ಸ್ವಯಂ ಪ್ರೇರಣೆಯಿಂದ ಸುಪ್ರೀಂ ಕೋರ್ಟ್ ಮುಂದೆ ಸಮಿತಿ ವಕೀಲನ ಎಲ್ಲ ಹೊಣೆಗಾರಿಕೆಗಳನ್ನು ರದ್ದುಪಡಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಕಚೇರಿಯಲ್ಲಿ ಬಾಕಿ ಇರುವ ಎಲ್ಲಾ ವಿಷಯಗಳಲ್ಲಿನ ಫೈಲ್‌ಗಳು, ಎನ್‌ಒಸಿಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದಾಗಿ
ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

SCROLL FOR NEXT