ದೇಶ

ದೆಹಲಿಯಲ್ಲಿ ಎಲ್ಲರಿಗೂ ಲಸಿಕೆ ನೀಡಲು 2.6 ಕೋಟಿ ಡೋಸ್ ಲಸಿಕೆ ನೀಡಿ: ಕೇಂದ್ರಕ್ಕೆ ಕೇಜ್ರಿವಾಲ್ ಆಗ್ರಹ

Lingaraj Badiger

ನವದೆಹಲಿ: ದೆಹಲಿಯಲ್ಲಿ ಕೋವಿಡ್ -19 ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.

ಮುಂದಿನ ಮೂರು ತಿಂಗಳಲ್ಲಿ ರಾಷ್ಟ್ರ ರಾಜಧಾನಿಯ ಎಲ್ಲಾ ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಸುಮಾರು 2.6 ಕೋಟಿ ಡೋಸ್ ಲಸಿಕೆ ಪೂರೈಸಬೇಕೆಂದು ದೆಹಲಿ ಸಿಎಂ ಒತ್ತಾಯಿಸಿದ್ದಾರೆ.

ಪ್ರಸ್ತುತ ದೆಹಲಿಯಲ್ಲಿ 100 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಕೇಂದ್ರಗಳ ಸಂಖ್ಯೆಯನ್ನು ದೆಹಲಿ ಸರ್ಕಾರ 250-300 ಕ್ಕೆ ಹೆಚ್ಚಿಸಲಿದೆ ಎಂದು ಕೇಜ್ರಿವಾಲ್ ಅವರು ಆನ್‌ಲೈನ್ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ.

ದೆಹಲಿಯ ಎಲ್ಲ ಜನರಿಗೆ ಲಸಿಕೆ ನೀಡುವ ಸಲುವಾಗಿ, ಮೂರು ಕೋಟಿಗೂ ಅಧಿಕ ಡೋಸ್ ಲಸಿಕೆಯ ಅಗತ್ಯವಿರುತ್ತದೆ. ಅದರಲ್ಲಿ ಸುಮಾರು 40 ಲಕ್ಷ ಡೋಸ್ ಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು. 

ಮುಂದಿನ ಮೂರು ತಿಂಗಳಲ್ಲಿ ದೆಹಲಿಯ ಎಲ್ಲಾ ಜನರಿಗೆ ಲಸಿಕೆ ನೀಡಲು ತಿಂಗಳಿಗೆ 85 ಲಕ್ಷ ಡೋಸೇಜ್ ನೀಡುವಂತೆ ದೆಹಲಿ ಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

SCROLL FOR NEXT