ದೇಶ

ಪ್ರಾಣಿಗಳಿಗೂ ಹಬ್ಬಿದ ಸೋಂಕು: ಉತ್ತರ ಪ್ರದೇಶದ ಇಟಾವಾ ಸಫಾರಿ ಪಾರ್ಕ್ ನಲ್ಲಿ ಎರಡು ಸಿಂಹಗಳಿಗೆ ಕೊರೋನಾ!

Sumana Upadhyaya

ಇಟಾವಾ ಸಫಾರಿ ಪಾರ್ಕ್ (ಉತ್ತರ ಪ್ರದೇಶ): ಮನುಷ್ಯರ ನಂತರ ಇದೀಗ ಪ್ರಾಣಿಗಳಿಗೂ ಕೊರೋನಾ ಸೋಂಕು ತಗುಲುತ್ತಿದೆ. ಉತ್ತರ ಪ್ರದೇಶದ ಇಟಾವಾ ಸಫಾರಿ ಪಾರ್ಕ್ ನಲ್ಲಿರುವ ಎರಡು ಸಿಂಹಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಅವುಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಪಾರ್ಕ್ ನ ನಿರ್ದೇಶಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಹೈದರಾಬಾದ್ ನಲ್ಲಿ ಎಂಟು ಏಷ್ಯಾ ಸಿಂಹಗಳಿಗೆ ಸೋಂಕು ತಗುಲಿತ್ತು. ಇಟಾವಾ ಸಫಾರಿ ಪಾರ್ಕ್ ನ 14 ಏಷ್ಯಾಟಿಕ್ ಸಿಂಹಗಳ 16 ಮಾದರಿಗಳನ್ನು ಭಾರತೀಯ ಪಶುಸಂಗೋಪನಾ ಸಂಶೋಧನಾ ಸಂಸ್ಥೆಗೆ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ.

ಮೊನ್ನೆ ಗುರುವಾರ ಒಂದು ಸಿಂಹಿಣಿಗೆ ಕೋವಿಡ್ ಸೋಂಕು ಪತ್ತೆಯಾಗಿತ್ತು. ಮತ್ತೊಂದಕ್ಕೆ ಸೋಂಕು ತಗುಲಿರುವ ಸಂಶಯವಿತ್ತು. ಉಳಿದ 12 ಸಿಂಹಗಳ ಕೊರೋನಾ ವರದಿ ನೆಗೆಟಿವ್ ಬಂದಿತ್ತು ಎಂದು ಐವಿಆರ್ ಐ ಜಂಟಿ ನಿರ್ದೇಶಕ ಡಾ ಕೆ ಪಿ ಸಿಂಗ್ ತಿಳಿಸಿದ್ದಾರೆ.

ನಿನ್ನೆ ದೆಹಲಿ ಮೃಗಾಲಯದ ಸಿಂಹದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು. ಕೊರೋನಾ ಲಕ್ಷಣಗಳನ್ನು ಹೊಂದಿರದ ಆದರೆ ಸೋಂಕಿತರಾಗಿರುವ ಮೃಗಾಲಯದಲ್ಲಿ ಪಾಲನೆ, ಪೋಷಣೆ ಮಾಡುವವರಿಂದ ಸೋಂಕು ತಗುಲಿರಬಹುದು ಎಂದು ಡಾ ಸಿಂಗ್ ತಿಳಿಸಿದ್ದಾರೆ.

SCROLL FOR NEXT