ದೇಶ

ಕೋವಿಡ್-19: ಸರ್ವಪಕ್ಷಗಳ ಸಭೆ ಕರೆಯುವಂತೆ ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

Srinivas Rao BV

ಬೆಂಗಳೂರು: ದೇಶದಲ್ಲಿ ಕೋವಿಡ್‍ ಸಾಂಕ್ರಾಮಿಕ ನಿಗ್ರಹಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮತ್ತು ಕೊರೋನಾ ವೈರಸ್‍ ನ ಎರಡನೇ ಅಲೆಯ ಕುರಿತು ಚರ್ಚಿಸಲು ಶೀಘ್ರವೇ ಸರ್ವಪಕ್ಷಗಳ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. 

ಎಲ್ಲರಿಗೂ ಕೋವಿಡ್ ‍ಲಸಿಕೆ ಲಭ್ಯವಾಗುವಂತಾಗಲು ಕೇಂದ್ರ ಬಜೆಟ್ ನಲ್ಲಿ ಸಂಸತ್‍ 35,000 ಕೋಟಿ ರೂ. ಒದಗಿಸಿದೆಯಾದರೂ, ಕೇಂದ್ರ ಸರ್ಕಾರ, ಲಸಿಕೆಯನ್ನು ವಿವಿಧ ದರಗಳಲ್ಲಿ ಮಾರಾಟ ಮಾಡಲು ಖಾಸಗಿ ಕಂಪೆನಿಗಳಿಗೆ ಅನುಮತಿಸಿದೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಖರ್ಗೆ ಹೇಳಿದ್ದಾರೆ. 

ಜೀವರಕ್ಷಕ ಸಾಧನಗಳು ಮತ್ತು ಔಷಧಗಳ ಮೇಲಿನ ಜಿಎಸ್ ಟಿ ರದ್ದುಪಡಿಸಬೇಕು ಮತ್ತು ಮನ್ರೇಗಾ ಯೋಜನೆಯಡಿ ಕೆಲಸದ ಅವಧಿಯನ್ನು 200 ತಾಸಿಗೆ ಹೆಚ್ಚಿಸಬೇಕು. ಎಲ್ಲ ರಾಜ್ಯಗಳಿಗೆ ನ್ಯಾಯಯುತವಾಗಿ ಪರಿಹಾರ ಸಾಮಗ್ರಿಯನ್ನು ವಿತರಿಸಬೇಕು. ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲು ಕಡ್ಡಾಯ ಪರವಾನಿಗೆ ಅಧಿಕಗೊಳಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

SCROLL FOR NEXT