ದೇಶ

ತೆಲಂಗಾಣ: ಅಮ್ಮಂದಿರ ದಿನದಂದೇ ಕೊರೋನಾ ಬಂದಿದೆ ಎಂದು ತಾಯಿಯನ್ನು ಬೀದಿಗೆ ತಳ್ಳಿದ ಮಕ್ಕಳು!

Lingaraj Badiger

ಖಮ್ಮಮ್: ಅಮ್ಮಂದಿರ ದಿನದಂದೇ ಕೊರೋನಾ ಸೋಂಕು ತಗುಲಿದೆ ಎಂಬ ಅನುಮಾನದ ಮೇಲೆ 62 ಹೆತ್ತ ತಾಯಿಯನ್ನು ಬೀದಿಗೆ ತಳ್ಳಿದ ಅಮಾನವೀಯ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯ ಮಾಧಿರ ಪಟ್ಟಣದ ಎಸ್‌ಸಿ ಕಾಲೋನಿಯಲ್ಲಿ ಭಾನುವಾರ ನಡೆದಿದೆ.

ವಿಪರ್ಯಾಸವೆಂದರೆ, ಈ ಘಟನೆ ತಾಯಿಯ ದಿನದಂದು ಸಂಭವಿಸಿದ್ದು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದ 62 ವರ್ಷದ ಗದ್ದಾಲಾ ರಾಹೆಲ್ ಅವರಿಗೆ ಎರಡು ದಿನಗಳ ಹಿಂದೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಅವರಲ್ಲಿ ಕೊರೋನಾ ರೋಗಲಕ್ಷಣಗಳನ್ನು ಕಾಣಿಸಿಕೊಂಡ ತಕ್ಷಣ ಆಕೆಯ ಹಿರಿಯ ಮಗ ಪ್ರಭಾಕರ್, ಆತನ ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ. ಅವರ ಕಿರಿಯ ಮಗ ಬಾಬು ಕೂಡ ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಆತನ ಪತ್ನಿ ಮತ್ತು ಮಕ್ಕಳು ಸಹ ಮನೆ ಬಿಟ್ಟು ಹೋಗಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಬಾಬು ತಾಯಿ ರಾಹೆಲ್ ಅವರನ್ನು ಬೀದಿಗೆ ತಳ್ಳಿದ್ದಾರೆ. ಮಹಿಳೆಯ ಏಕೈಕ ಮಗಳು ಹೈದರಾಬಾದ್ ನಲ್ಲಿದ್ದು, ಅಲ್ಲಿಗೂ ಹೋಗಲು ಸಾಧ್ಯವಾಗದೇ ಬೀದಿಯಲ್ಲೇ ವಾಸಿಸುವಂತಾಗಿದೆ.

ನೆರೆಹೊರೆಯವರು ಘಟನೆಯ ಬಗ್ಗೆ ಕೌನ್ಸಿಲರ್ ಜಿ ಮಾಧುರಿಗೆ ಮಾಹಿತಿ ನೀಡಿದ್ದು, ಅವರು ಸಾಮಾಜಿಕ ಕಾರ್ಯಕರ್ತರಾದ ಡೊರ್ನಾಲಾ ರಾಮಕೃಷ್ಣ ಮತ್ತು ನಿಸ್ಸಿ ಹರಿಣಿಯ ಅವರ ಸಹಕಾರದೊಂದಿಗೆ ತಾಯಿ ಮತ್ತು ಕಿರಿಯ ಮಗ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಕೊರೋನಾ ಪರೀಕ್ಷೆ ನಡೆಸಲಾಗಿದ್ದೂ, ಇಬ್ಬರಿಗೂ ಕೋವಿಡ್ ನೆಗಟಿವ್ ಬಂದಿದೆ.

SCROLL FOR NEXT