ದೇಶ

ಗಂಗಾ ನದಿಯಲ್ಲಿ ಶಂಕಿತ ಕೋವಿಡ್‌ ಮೃತ ದೇಹಗಳು ಪತ್ತೆ: ಬಿಹಾರದಲ್ಲಿ ಆತಂಕ ಸೃಷ್ಟಿ

Lingaraj Badiger

ಪಾಟ್ನಾ: ಬಿಹಾರ ರಾಜ್ಯದ ಬಕ್ಸರ್ ಜಿಲ್ಲೆಯ ಗಂಗಾ ನದಿಯಲ್ಲಿ ಶಂಕಿತ ಕೋವಿಡ್‌ ಮೃತ ದೇಹಗಳು ತೇಲುತ್ತಿರುವುದು ಬೆಳಕಿ ಬಂದಿದೆ. ಆದರೆ, ಈ ಮೃತ ದೇಹಗಳು ನೆರೆಯ ಉತ್ತರ ಪ್ರದೇಶದಿಂದ ಕೊಚ್ಚಿಕೊಂಡು ಬರುತ್ತಿರಬಹುದು. ಮೃತ ದೇಹಗಳು ನಮ್ಮ ರಾಜ್ಯಕ್ಕೆ ಸೇರಿದವಲ್ಲ ಎಂದು ಬಕ್ಸಾರ್ ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ.

ಜಿಲ್ಲೆಯ ಮಹಾದೇವ್ ಘಾಟ್‌ ಬಳಿ ಸುಮಾರು 100 ಮೃತ ದೇಹಗಳು ಗಂಗಾನದಿ ನೀರಿನಲ್ಲಿ ತೇಲಾಡುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊಗಳು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಚೌದಾಗೆ ಸೇರಿದ ಬಿಡಿಓ ಅಶೋಕ್ ಕುಮಾರ್ ಮಾತನಾಡಿ "ಮಹಾದೇವ್ ಘಾಟ್‌ನಲ್ಲಿ ಸುಮಾರು 40 ರಿಂದ 45 ಮೃತ ದೇಹಗಳು ಕೊಚ್ಚಿಕೊಂಡು ಬಂದಿವೆ. ಇವು ಬೇರೆ ಬೇರೆ ಪ್ರದೇಶಗಳಿಂದ ಬಂದವುಗಳಾಗಿವೆ. ಕೋವಿಡ್‌ ನಿಂದ ಇಲ್ಲಿ ಯಾರಾದರೂ ಮೃತಪಟ್ಟರೆ ಶವಗಳನ್ನು ದಹಿಸುವ ಸಂಪ್ರದಾಯವಿದೆ. ಇದಕ್ಕಾಗಿ ಕಾವಲುಗಾರನೊಬ್ಬನನ್ನು ನಿಯೋಜಿಸಿ ಸುಡುವ ಪ್ರಕ್ರಿಯೆ ನಡೆಸುತ್ತೇವೆ. ಮೃತ ದೇಹಗಳು ಉತ್ತರ ಪ್ರದೇಶದಿಂದ ತೇಲಿ ಬಂದವಾಗಿವೆ. ನದಿಯಲ್ಲಿ ಮೃತ ದೇಹಗಳನ್ನು ತಡೆಯಲು ಯಾವುದೇ ಮಾರ್ಗವಿಲ್ಲದ ಕಾರಣ ಶವಗಳು ಇಲ್ಲಿಯವರೆಗೆ ಕೊಚ್ಚಿಕೊಂಡು ಬಂದಿವೆ ”ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನೂರಾರು ಕೋವಿಡ್‌ ಮೃತ ದೇಹಗಳನ್ನು ಸುಡಲಾಗುತ್ತಿದೆ ಎಂಬ ಟೀಕೆಗಳ ನಡುವೆ ಗಂಗಾ ನದಿಯಲ್ಲಿ ತೇಲುತ್ತಿರುವ ಮೃತ ದೇಹಗಳು ಉತ್ತರ ಪ್ರದೇಶಕ್ಕೆ ಸೇರಿವೆ ಎಂಬ ಬಿಹಾರ ಅಧಿಕಾರಿಗಳ ಹೇಳಿಕೆ ಮತ್ತಷ್ಟು ಟೀಕೆಗಳಿಗೆ ಗುರಿಯಾಗಿದೆ. ಈವರೆಗೆ ನೆಟ್ ಜನ್‌ಗಳು ದೊಡ್ಡ ಪ್ರಮಾಣದಲ್ಲಿ ಈ ವಿಷಯದ ಬಗ್ಗೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

SCROLL FOR NEXT