ದೇಶ

ಪತಿಯ ಅಂತ್ಯಕ್ರಿಯೆಗಾಗಿ ಪತ್ನಿ ಪರಿಪರಿಯಾಗಿ ಬೇಡಿದರು ಬಾರದ ಬಿಜೆಪಿಗರು, ಕೊನೆಗೆ ಟಿಎಂಸಿ ಕಾರ್ಯಕರ್ತರಿಂದ ಅಂತ್ಯಕ್ರಿಯೆ!

Vishwanath S

ಕೋಲ್ಕತಾ: ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟ ಬಿಜೆಪಿ ನಾಯಕನ ಅಂತ್ಯಕ್ರಿಯೆ ನೆರವೇರಿಸುವಂತೆ ಮೃತನ ಪತ್ನಿ ಬಿಜೆಪಿಗರಲ್ಲಿ ಪರಿಪರಿಯಾಗಿ ಬೇಡಿಕೊಂಡರು ಯಾರೂ ಮುಂದೆ ಬಾರದ ಹಿನ್ನಲೆಯಲ್ಲಿ ಕೊನೆಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಾವು ಮುಂದೆ ಬಂದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 

ಬಿಜೆಪಿಯ ಬೂತ್ ಅಧ್ಯಕ್ಷರಾಗಿದ್ದ 60 ವರ್ಷದ ಅನುಪ್ ಬ್ಯಾನರ್ಜಿ ಶುಕ್ರವಾರ ನಿಧನರಾಗಿದ್ದರು. ಕೋವಿಡ್ -19 ರಿಂದ ಬ್ಯಾನರ್ಜಿ ನಿಧನರಾಗಿದ್ದಾರೆ ಎಂದು ಶಂಕಿಸಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅವರ ಅಂತ್ಯಕ್ರಿಯೆಗೆ ಮುಂದೆ ಬರಲಿಲ್ಲ. ಅವರು ಕೋವಿಡ್ ನಿಂದ ಮೃತಪಟ್ಟಿಲ್ಲ ಎಂದು ಪತ್ನಿ ರೀನಾ ಪರಿಪರಿಯಾಗಿ ಬೇಡಿಕೊಂಡರೂ ಯಾರು ಮುಂದೆ ಬರಲಿಲ್ಲ. ಇದರಿಂದ ರೀತಿ ರಾತ್ರಿಯಿಡೀ ಅವರ ದೇಹದ ಪಕ್ಕದಲ್ಲಿ ಕಾವಲು ನಿಂತಿದ್ದಳು. 

ಶನಿವಾರ ಮಧ್ಯಾಹ್ನ ಸ್ಥಳೀಯ ಟಿಎಂಸಿ ಮುಖಂಡ ಬುಡುನ್ ಶೇಖ್ ಅವರು ಪಕ್ಷದ ಕಾರ್ಯಕರ್ತರಿಗೆ ಹೋಗಿ ಕುಟುಂಬಕ್ಕೆ ಸಹಾಯ ಮಾಡುವಂತೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಟಿಎಂಸಿ ಕಾರ್ಯಕರ್ತರು ಬ್ಯಾನರ್ಜಿಯ ದೇಹವನ್ನು ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದರು.

ನನ್ನ ಪತಿ ತೀರಿಕೊಂಡಾಗ ಮಧ್ಯಾಹ್ನ 1 ಗಂಟೆ ಆಗಿತ್ತು. ಅವರಿಗೆ ಕೋವಿಡ್ -19ರ ಲಕ್ಷಣಗಳಿರಲಿಲ್ಲ. ಅವರು ದೈಹಿಕ ಕಾಯಿಲೆಗಳಿಂದ ಬಳಲುತ್ತಿದ್ದು ಕೊನೆಗೆ ಹೃದಯ ಸ್ತಂಭನವಾಗಿ ಮೃತಪಟ್ಟಿದ್ದರು ಎಂದು ರೀನಾ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪತಿ ಕಷ್ಟಪಟ್ಟು ಕೆಲಸ ಮಾಡಿದ್ದರು. ಇನ್ನು ಅವರ ಸಾವಿನ ಬಗ್ಗೆ ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಹಿತಿ ನೀಡಿದೆ. ಮೊದಲಿಗೆ ಶೀಘ್ರದಲ್ಲೇ ಬರುವುದಾಗಿ ಹೇಳಿದ ನಾಯಕರು ಎಷ್ಟು ಸಮಯವಾದರೂ ಇತ್ತ ಮುಖಮಾಡಿ ನೋಡಲಿಲ್ಲ ಎಂದು ರೀನಾ ಹೇಳಿದರು.

"ನನ್ನ ಪತಿ ಕೊರೋನಾದಿಂದ ನಿಧನರಾಗಿದ್ದಾರೆ ಎಂಬ ವದಂತಿಯನ್ನು ಹಬ್ಬಿತ್ತು. ಇನ್ನು ಅವರನ್ನು ಶವಾಗಾರಕ್ಕೆ ಕರೆದೊಯ್ಯಲು ನನಗೆ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ರಾತ್ರಿಯಿಡೀ ಬಿರುಗಾಳಿ ಸಹಿತ ಭಾರಿ ಮಳೆ ಬೀಳುತ್ತಿದ್ದರಿಂದ ನಾನು ಪತಿಯ ಮೃತದೇಹದೊಂದಿಗೆ ರಾತ್ರಿ ಕಳೆಯಬೇಕಾಗಿತ್ತು ಎಂದು ರೀನಾ ಹೇಳಿದ್ದಾರೆ. 

SCROLL FOR NEXT