ದೇಶ

ಪಾಸಿಟಿವ್ ಪ್ರಮಾಣ ಇನ್ನೂ ಹೆಚ್ಚಾಗಿರುವುದರಿಂದ ಕೇರಳದಲ್ಲಿ ಲಾಕ್‌ಡೌನ್ ಮೇ 23ರವರೆಗೆ ವಿಸ್ತರಣೆ

Lingaraj Badiger

ತಿರುವನಂತಪುರಂ: ವ್ಯಾಪಕ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಕೇರಳದಲ್ಲಿ ಮೇ 8 ರಿಂದ ಮೇ 16 ರವರೆಗೆ ಜಾರಿಗೊಳಿಸಲಾಗಿದ್ದ ಸಂಪೂರ್ಣ ಲಾಕ್‌ಡೌನ್ ಅನ್ನು ಮೇ 23 ರವರೆಗೆ ವಿಸ್ತರಿಸಲಾಗುವುದು ಎಂದು ಕೇರಳ ಸರ್ಕಾರ ಶುಕ್ರವಾರ ಪ್ರಕಟಿಸಿದೆ.

ಜಿಲ್ಲೆಗಳಲ್ಲಿ ಇನ್ನೂ ಪಾಸಿಟಿವ್ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಲಾಕ್‌ಡೌನ್ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.

ಈ ಹಿಂದೆ, ವಾರಾಂತ್ಯದ ವೇಳೆಗೆ ಪರಿಸ್ಥಿತಿಯನ್ನು ಅಂದಾಜು ಮಾಡಿದ ನಂತರ ಲಾಕ್ ಡೌನ್ ವಿಸ್ತರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು.

ರಾಜ್ಯದಲ್ಲಿ ಲಾಕ್ ಡೌನ್ ತೆರವುಗೊಳಿಸಲು ಪರಿಸ್ಥಿತಿ ಹೆಚ್ಚು ಸುಧಾರಿಸಿಲ್ಲ ಎಂಬ ಕಾರಣಕ್ಕೆ ತಜ್ಞರು ಸಹ ಲಾಕ್‌ಡೌನ್ ಅನ್ನು ಮುಂದುವರೆಸುವಂತೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.

SCROLL FOR NEXT