ದೇಶ

ಇಮೇಜ್ ಕಾಪಾಡಿಕೊಳ್ಳುವುದಕ್ಕಿಂತ ಜನರ ಪ್ರಾಣ ರಕ್ಷಣೆ ಮುಖ್ಯ: ಭಾರತದ ಕೋವಿಡ್ ಪರಿಸ್ಥಿತಿ ಬಗ್ಗೆ ಅನುಪಮ್ ಖೇರ್ ಮಾತು!

Shilpa D

ನವದೆಹಲಿ: ಕೋವಿಡ್ ಎರಡನೇ ಅಲೆ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದೆ. ಈ ಪರಿಸ್ಥಿತಿಯನ್ನು ಇನ್ನೊಂದು ಪಕ್ಷದವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಕೂಡ ಸರಿಯಲ್ಲ. ಸದ್ಯ ಆಗುತ್ತಿರುವುದಕ್ಕೆಲ್ಲ ಸರ್ಕಾರವೇ ಕಾರಣ. ಬರೀ ಇಮೇಜ್​ ಸೃಷ್ಟಿಸಿಕೊಳ್ಳುವುದಕ್ಕಿಂತ ಜನರ ಪ್ರಾಣ ಕೂಡ ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಅನುಪಮ್​ ಖೇರ್​ ಹೇಳಿದ್ದಾರೆ.

ಎನ್ ಡಿಟಿವಿ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು. ಕೊರೋನಾದ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ, 'ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಎಡವಿದೆ. ತಮ್ಮ ಇಮೇಜ್ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಬದಲಿಗೆ ಜೀವ ಉಳಿಸುವ ಕೆಲಸಗಳನ್ನು ಮಾಡಬೇಕು' ಎಂದಿದ್ದಾರೆ.

ಸರ್ಕಾರದ ವಿರುದ್ಧ ಮಾಡಲಾಗುತ್ತಿರುವ ಟೀಕೆಗಳು ಸರಿಯಾದ ಹಾದಿಯಲ್ಲಿವೆ. ಈಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಜನರು ಸರ್ಕಾರವನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿದ್ದಾರೆಯೋ ಆ ಕಾರ್ಯವನ್ನು ಅವರು ಈಗ ಮಾಡಲೇ ಬೇಕು' ಎಂದಿದ್ದಾರೆ ಅನುಪಮ್ ಖೇರ್.

'ಸಾಮಾನ್ಯ ಪ್ರಜೆಗಳಾದ ನಾವು ಈ ಸನ್ನಿವೇಶದಲ್ಲಿ ಆಕ್ರೋಶ ಪ್ರದರ್ಶಿಸಲೇ ಬೇಕು. ಸರ್ಕಾರವನ್ನು ಹೊಣೆಯನ್ನಾಗಿ ಮಾಡಲೇಬೇಕು' 'ಬೆಡ್‌ಗಳು ಸಿಗದೆ, ಆಮ್ಲಜನಕ ಸಿಗದೆ ಒದ್ದಾಡುತ್ತಿರುವವರನ್ನು ನೋಡಿದಾಗ, ಗಂಗೆಯಲ್ಲಿ ತೇಲುತ್ತಿರುವ ಹೆಣಗಳನ್ನು ನೋಡಿದಾಗ' ಆಕ್ರೋಶ ಉಕ್ಕಿ ಬರುತ್ತದೆ ಎಂದಿದ್ದಾರೆ.

ದೇಹಗಳು ತೇಲುವುದನ್ನು ನೋಡಿ ಸುಮ್ಮನಿರುವುದು ಅಮಾನವೀಯ ವ್ಯಕ್ತಿಗೆ ಸಾಧ್ಯ. ಆದರೆ ಇನ್ನೊಂದು ರಾಜಕೀಯ ಪಕ್ಷವು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಕೂಡ ಸರಿಯಲ್ಲ ಎಂದಿದ್ದಾರೆ.

ಅನುಪಮ್ ಖೇರ್ ಅವರು ಮೋದಿಯ ಬಹುದೊಡ್ಡ ಬೆಂಬಲಿಗರಾಗಿದ್ದರು. ಸಾಕಷ್ಟು ವೇದಿಕೆಗಳನ್ನು ಮೋದಿಯನ್ನು ಬಿಜೆಪಿ ಸರ್ಕಾರವನ್ನು ಬಹುವಾಗಿ ಹೊಗಳುತ್ತಿದ್ದರು. ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಬಿಜೆಪಿ ಸಂಸದೆಯಾಗಿದ್ದಾರೆ. 

SCROLL FOR NEXT