ದೇಶ

ಕೋವಿಡ್-19: ಪಶ್ಚಿಮ ಬಂಗಾಳದಲ್ಲಿ ಮೇ 30ರವರೆಗೂ ಲಾಕ್ ಡೌನ್ ವಿಸ್ತರಣೆ

Srinivasamurthy VN

ಕೋಲ್ಕತಾ; ಪಶ್ಚಿಮ ಬಂಗಾಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗದ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಮೇ 30ರವರೆಗೂ ಸಂಪೂರ್ಣ ಲಾಕ್ಡೌನ್ ಅನ್ನು ವಿಸ್ತರಿಸಿದೆ.

ಬಂಗಾಳದಲ್ಲಿ ಶುಕ್ರವಾರ ಕೂಡ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದ್ದು, 136 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಶುಕ್ರವಾರ ಒಂದೇ ದಿನ 20,846 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು ಆ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 10,94,802ಕ್ಕೆ ಏರಿಕೆಯಾಗಿದೆ.  ಅಂತೆಯೇ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಕೂಡ 12,993ಕ್ಕೆ 

ಶುಕ್ರವಾರ ಒಂದೇ ದಿನ ಸಾವನ್ನಪ್ಪಿದ 139 ಮಂದಿಯ ಪೈಕಿ ಐದು ಪ್ರಮುಖ ವೈದ್ಯರೂ ಕೂಡ ಸೇರಿದ್ದಾರೆ. ಹೀಗಾಗಿ ಇಂದು ಸಭೆ ನಡೆಸಿದ ಸರ್ಕಾರ ಮತ್ತೆ 15 ದಿನಗಳ ಲಾಕ್ಡೌನ್ ಮುಂದುವರೆಸಲಿದೆ ಎಂದು ಬಂಗಾಳ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ ಲಾಕ್ ಡೌನ್ ಅನ್ನು ಮತ್ತಷ್ಟು ಸಮರ್ಥವಾಗಿ  ಜಾರಿಗೆ ತರಲು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತದೆ ಎಂದೂ ಹೇಳಲಾಗಿದೆ.

SCROLL FOR NEXT