ದೇಶ

ರಾಜ್ಯಗಳಿಗೆ ಕೋವಿಡ್ ಲಸಿಕೆ ಹಂಚಿಕೆ ಮಾಹಿತಿ ಬಹಿರಂಗಪಡಿಸಿ: ಕೇಂದ್ರಕ್ಕೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಆಗ್ರಹ

Lingaraj Badiger

ನವದೆಹಲಿ: ಕೇಂದ್ರದಿಂದ ರಾಜ್ಯಗಳಿಗೆ ಸರಬರಾಜು ಮಾಡಿದ ಲಸಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಷ್ಟ್ರ ರಾಜಧಾನಿಗೆ 18 ರಿಂದ 44 ವರ್ಷದವರಿಗೆ 3.82 ಲಕ್ಷ ಡೋಸ್ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದ ಸಿಸೋಡಿಯಾ, ಪ್ರಸ್ತುತ, ದೆಹಲಿಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ನಾಲ್ಕು ದಿನಗಳ ಆಗುವಷ್ಟು ಲಸಿಕೆ ಮಾತ್ರ ದಾಸ್ತಾನು ಇದೆ. 18ರಿಂದ 44 ವರ್ಷದವರಿಗೆ ನೀಡುವ ಲಸಿಕೆ ಮೂರು ದಿನದಲ್ಲಿ ಖಾಲಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೂರು ವಿನಂತಿಗಳನ್ನು ಉಲ್ಲೇಖಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದು ಸಿಸೋಡಿಯಾ ಹೇಳಿದ್ದಾರೆ. "45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ 3.83 ಲಕ್ಷ ಡೋಸ್ ನೀಡುತ್ತೇವೆ. ಆದರೆ ಮೇ ತಿಂಗಳಲ್ಲಿ 18-44 ವರ್ಷದವರಿಗೆ ಯಾವುದೇ ಲಸಿಕೆಗಳನ್ನು ನೀಡುವುದಿಲ್ಲ" ಎಂದು ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ತಿಳಿಸಿದೆ ಎಂದು ಅವರು ತಿಳಿಸಿದ್ದಾರೆ.

"ನಮಗೆ 18-44 ವಯೋಮಾನದವರಿಗೆ ಹೆಚ್ಚಿನ ಲಸಿಕೆಗಳು ಬೇಕಾಗುತ್ತವೆ. ನಾವು ಅವುಗಳನ್ನು ಖರೀದಿಸಲು ಸಿದ್ಧರಿದ್ದೇವೆ. ಆದರೆ ಕನಿಷ್ಠ ಲಭ್ಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ 18-44 ವಯೋಮಾನದವರ ಲಸಿಕಾ ಕೇಂದ್ರಗಳನ್ನು ಮೂರು ದಿನಗಳ ನಂತರ ಮುಚ್ಚಬೇಕಾಗುತ್ತದೆ" ಎಂದು ಡಿಸಿಎಂ ಹೇಳಿದ್ದಾರೆ.

SCROLL FOR NEXT