ದೇಶ

ಪಂಜಾಬ್ ನ ಮೊಗಾದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಭೀಕರ ಅಪಘಾತ: ಪೈಲಟ್ ಸಾವು

Sumana Upadhyaya

ಮೊಗಾ(ಪಂಜಾಬ್): ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪಂಜಾಬ್ ನ ಮೊಗಾ ಎಂಬಲ್ಲಿ ಅಪಘಾತಕ್ಕೀಡಾದ ಘಟನೆ ಕಳೆದ ತಡರಾತ್ರಿ ನಡೆದಿದೆ. ಯುದ್ಧ ವಿಮಾನದಲ್ಲಿ ಪೈಲಟ್ ದಿನನಿತ್ಯದ ತರಬೇತಿ ನಡೆಸುತ್ತಿದ್ದರು ಎಂದು ಭಾರತೀಯ ವಿಮಾನ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯ ಬಿಸನ್ ಯುದ್ಧ ವಿಮಾನ ಪಶ್ಚಿಮ ವಲಯದಲ್ಲಿ ಅಪ್ಪಳಿಸಿ ಅಪಘಾತಗೊಂಡಿದೆ. ಘಟನೆಯಲ್ಲಿ ಪೈಲಟ್ ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ವಾಯುಪಡೆ ಕುಟುಂಬಸ್ಥರ ಸಂಕಷ್ಟ ಸಮಯದಲ್ಲಿ ಅವರ ಪರವಾಗಿ ಇರುವುದಾಗಿ ಹೇಳಿದ್ದಾರೆ.

ತನಿಖೆಗೆ ಆದೇಶ: ಕಳೆದ ರಾತ್ರಿ ಸಂಭವಿಸಿದ ಯುದ್ಧ ವಿಮಾನ ಬಿಸನ್ ನ ಅಪಘಾತಕ್ಕೆ ನಿಖರ ಕಾರಣ ತಿಳಿಯಲು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

SCROLL FOR NEXT