ದೇಶ

ಕರ್ನಾಟಕಕ್ಕೆ 1270 ವೈಯಲ್ಸ್ ಸೇರಿದಂತೆ ದೇಶಾದ್ಯಂತ 23,680 ಬ್ಲ್ಯಾಕ್ ಫಂಗಸ್ ಔಷಧಿ ಆಂಫೊಟೆರಿಸಿನ್-ಬಿ ವಿತರಣೆ: ಕೇಂದ್ರ ಸರ್ಕಾರ

Srinivasamurthy VN

ಬೆಂಗಳೂರು; ಕೊರೋನಾ ವೈರಸ್ ಸಾಂಕ್ರಾಮಿಕ ಬೆನ್ನಲ್ಲೇ ದೇಶಾದ್ಯಂತ ಮಾರಕವಾಗಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ) ಅಥವಾ ಮ್ಯೂಕೋಮೈಕೋಸಿಸ್‌ ಸೋಂಕು ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಆಂಫೊಟೆರಿಸಿನ್-ಬಿ ಯ 23,680 ವೈಯಲ್ ಔಷಧಿಗಳನ್ನು ರವಾನೆ  ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸದಾನಂದಗೌಡ ಅವರು ದೇಶಾದ್ಯಂತ ಒಟ್ಟು 8,848 ಬ್ಲ್ಯಾಕ್ ಫಂಗಸ್ ಸೋಂಕಿತರಿದ್ದು, ಗುಜರಾತ್ ನಲ್ಲಿ ಅತೀ ಹೆಚ್ಚು ಅಂದರೆ 2281 ಸೋಂಕಿತರಿದ್ದಾರೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, ಇಲ್ಲಿ 2000 ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಂತರದ  ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು, ಇಲ್ಲಿ 910 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಅಂತೆಯೇ ದೇಶದ ಎಲ್ಲ ರಾಜ್ಯಗಳಿಗೆ ಹೆಚ್ಚುವರಿಯಾಗಿ ಆಂಫೊಟೆರಿಸಿನ್-ಬಿ ಯ 23,680 ವೈಯಲ್ ಔಷಧಿಗಳನ್ನು ರವಾನೆ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 1270 ವೈಯಲ್ಸ್ ಗಳನ್ನು ರವಾನೆ ಮಾಡಲಾಗಿದೆ. ಅತೀ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರನ್ನು ಹೊಂದಿರುವ ಗುಜರಾತ್ ಗೆ 5800 ವೈಯಲ್ಸ್,  2000 ಸಾವಿರ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರಕ್ಕೆ 5090 ವೈಯಲ್ಸ್ ನೀಡಲಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಪ್ರಸ್ತುತ 500 ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

SCROLL FOR NEXT