ದೇಶ

ಆಕ್ಸಿಜನ್ ಎಕ್ಸ್ ಪ್ರೆಸ್: ವಿವಿಧ ರಾಜ್ಯಗಳಿಗೆ ಭಾರತೀಯ ರೈಲ್ವೆಯಿಂದ 14,500 ಟನ್ ಆಕ್ಸಿಜನ್ ಪೂರೈಕೆ!

Nagaraja AB

ನವದೆಹಲಿ: ವಿವಿಧ ರಾಜ್ಯಗಳಿಗೆ ಸುಮಾರು 884 ಟ್ಯಾಂಕರ್ ಗಳಲ್ಲಿ 14,500 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಕೆ ಮಾಡಿರುವುದಾಗಿ ಭಾರತೀಯ ರೈಲ್ವೆ ಶನಿವಾರ ಹೇಳಿದೆ.

ಈವರೆಗೂ 224 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ತಮ್ಮ ಸಂಚಾರವನ್ನು ಪೂರ್ಣಗೊಳಿದ್ದು, ವಿವಿಧ ರಾಜ್ಯಗಳಿಗೆ ಸ್ವಲ್ಪ ನೆಮ್ಮದಿ ನೀಡಿವೆ.  563 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ತುಂಬಿರುವ ಎಂಟು ಇತರ ರೈಲುಗಳು ಪ್ರಸ್ತುತ ತಮ್ಮ ಹಾದಿಯಲ್ಲಿವೆ.  

ಪ್ರತಿದಿನ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಸುಮಾರು 800 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ನ್ನು ವಿವಿಧ ರಾಜ್ಯಗಳಿಗೆ ಪೂರೈಸಿವೆ 
ಎಂದು ರೈಲ್ವೆ ತಿಳಿಸಿದೆ. 

ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ,
ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ 13 ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಿಂದ
ತುಸು ನೆಮ್ಮದಿ ದೊರಕಿದೆ.

ಶನಿವಾರ  ಕರ್ನಾಟಕಕ್ಕೆ 943 ಟನ್, ಮಹಾರಾಷ್ಟ್ರಕ್ಕೆ 614, ಉತ್ತರ ಪ್ರದೇಶಕ್ಕೆ 3,463, ಮಧ್ಯಪ್ರದೇಶಕ್ಕೆ 566, ದೆಹಲಿಗೆ 4,278, ಹರಿಯಾಣಕ್ಕೆ 1,698, ರಾಜಸ್ಥಾನಕ್ಕೆ 98, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 769, ಆಂಧ್ರಪ್ರದೇಶಕ್ಕೆ 571, ಪಂಜಾಬ್ ಗೆ 153, ಕೇರಳಕ್ಕೆ 246, ತೆಲಂಗಾಣಕ್ಕೆ 772 ಟನ್ ಆಕ್ಸಿಜನ್ ಪೂರೈಸಿರುವುದಾಗಿ ರೈಲ್ವೆ ಮಾಹಿತಿ ನೀಡಿದೆ.

SCROLL FOR NEXT