ದೇಶ

ಲಾಕ್‌ಡೌನ್‌ ಆದ ಮೊದಲ 4 ವಾರಗಳಲ್ಲಿ ದೆಹಲಿ ತೊರೆದ 8 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು

Lingaraj Badiger

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ನಿಯಂತ್ರಿಸಲು ಲಾಕ್‌ಡೌನ್ ಜಾರಿ ಮಾಡಿದ ಮೊದಲ ನಾಲ್ಕು ವಾರಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಾಷ್ಟ್ರ ರಾಜಧಾನಿ ತೊರೆದಿದ್ದಾರೆ ಎಂದು ದೆಹಲಿ ಸಾರಿಗೆ ಇಲಾಖೆಯ ವರದಿಯೊಂದು ತಿಳಿಸಿದೆ.

ಏಪ್ರಿಲ್ 19 ಮತ್ತು ಮೇ 14 ರ ನಡುವೆ ಒಟ್ಟು 8,07,032 ವಲಸೆ ಕಾರ್ಮಿಕರು ತಮ್ಮ ಸ್ವಂತ ರಾಜ್ಯಗಳಿಗೆ ಬಸ್‌ಗಳಲ್ಲಿ ದೆಹಲಿಯಿಂದ ಹೊರಟಿದ್ದು, ಅದರಲ್ಲಿ 3,79,604 ಜನರು ಲಾಕ್‌ಡೌನ್‌ ಜಾರಿಯಾದ ಮೊದಲ ವಾರದಲ್ಲಿಯೇ ದೆಹಲಿ ತೊರೆದಿದ್ದಾರೆ.

ಎರಡನೇ ವಾರದಲ್ಲಿ 2,12,448 ಕಾರ್ಮಿಕರು, ಮೂರನೇ ವಾರದಲ್ಲಿ 1,22,490 ಮತ್ತು ನಾಲ್ಕನೇ ವಾರದಲ್ಲಿ 92, 490 ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ.

"ನೆರೆಯ ರಾಜ್ಯಗಳ ಸಾರಿಗೆ ಅಧಿಕಾರಿಗಳೊಂದಿಗೆ, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದೊಂದಿಗೆ ದೆಹಲಿಯ  ಸರ್ಕಾರದ ಸಮಯೋಚಿತ ಹೊಂದಾಣಿಕೆಯಿಂದ ಸುಮಾರು ಎಂಟು ಲಕ್ಷ ವಲಸೆ ಕಾರ್ಮಿಕರು ಯಾವುದೇ ತೊಂದರೆಯಿಲ್ಲದೆ ತಮ್ಮ ತಮ್ಮ ಊರು ತಲುಪಲು ಸಹಾಯ ಮಾಡಿದೆ" ಎಂದು ವರದಿ ತಿಳಿಸಿದೆ.

ಲಾಕ್ ಡೌನ್ ಮಾಡಿದ ನಾಲ್ಕು ವಾರಗಳಲ್ಲಿ 21,879 ಅಂತರರಾಜ್ಯ ಬಸ್ ಗಳು ಪ್ರಯಾಣಿಸಿವೆ ಎಂದು ಅದು ಹೇಳಿದೆ. 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೊದಲ ಬಾರಿಗೆ ಏಪ್ರಿಲ್ 19 ರಂದು ಲಾಕ್ ಡೌನ್ ಘೋಷಿಸಿದ್ದರು, ನಂತರ ಅದನ್ನು ಹಲವು ಬಾರಿ ವಿಸ್ತರಿಸಲಾಯಿತು.

SCROLL FOR NEXT