ಉತ್ತರಪ್ರದೇಶ ಪೊಲೀಸರು 
ದೇಶ

ಆಸ್ತಿ ವಿವಾದ: ಅಯೋಧ್ಯೆಯಲ್ಲಿ 3 ಅಪ್ರಾಪ್ತ ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ

ಜಿಲ್ಲೆಯ ಇನಾಯತ್‌ನಗರ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಅಯೋಧ್ಯೆ: ಜಿಲ್ಲೆಯ ಇನಾಯತ್‌ನಗರ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಹತ್ಯೆ ಆರೋಪಿ ಪವನ್ ಎಂಬಾತ ತನ್ನ ಚಿಕ್ಕಪ್ಪನ ಗಂಟಲು ಸೀಳಿ ಕೊಲೆ ಮಾಡಿದ್ದಾನೆ ಎಂದು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ಭಾನುವಾರ ಹೇಳಿದ್ದಾರೆ.  

ಇನಾಯತ್‌ನಗರ ಪೊಲೀಸ್ ಠಾಣೆ ಪ್ರದೇಶದ ಖಾನ್ಪುರ್ ಮಜ್ರೆ ಗ್ರಾಮದಲ್ಲಿ ಆರೋಪಿ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಮೂವರು ಅಪ್ರಾಪ್ತ ಸಹೋದರರನ್ನೇ ಹತ್ಯೆ ಮಾಡಿದ್ದಾನೆ. 

ಮೃತರನ್ನು ರಾಕೇಶ್ ಕಹಾರ್, ಅವರ ಪತ್ನಿ ಜ್ಯೋತಿ ಮತ್ತು ಅವರ ಮೂವರು ಗಂಡು ಮಕ್ಕಳು 4, 6 ಮತ್ತು 8 ವರ್ಷದ ವಯಸ್ಸಿನವರು ಎಂದು ಗುರುತಿಸಲಾಗಿದೆ.

ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಈ ಹತ್ಯೆಗಳು ನಡೆದಿವೆ ಎಂದು ಡಿಎಂ ಅನಿಜ್ ಕುಮಾರ್ ಅವರು ತಿಳಿಸಿದ್ದು, ಪರಾರಿಯಾಗಿರುವ ಪವನ್ ನನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ವಿಶ್ವದಾದ್ಯಂತ ಏಕಕಾಲಕ್ಕೆ 'ರಾಮಾಯಣ ಭಾಗ 1' ಬಿಡುಗಡೆ: ದಸರಾ ಹಬ್ಬದಿಂದಲೇ ಮುಂಗಡ ಬುಕಿಂಗ್‌ ಆರಂಭ!

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್