ದೇಶ

ನಿರೀಕ್ಷಣಾ ಜಾಮೀನಿಗೆ ಸಾಂಕ್ರಾಮಿಕ ರೋಗ ಆಧಾರವಾಗುವುದಿಲ್ಲ: ಅಲಹಾಬಾದ್ ಹೈಕೋರ್ಟ್ ನ ನಿರ್ದೇಶನಕ್ಕೆ 'ಸುಪ್ರೀಂ' ತಡೆ

Srinivas Rao BV

ನವದೆಹಲಿ: ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸಾಂಕ್ರಾಮಿಕ ರೋಗ ಆಧಾರವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ವಂಚನೆ ಪ್ರಕರಣದ ಆರೋಪ ಎದುರಿಸುತ್ತಿದ್ದ ಆರೋಪಿಯೊಬ್ಬರಿಗೆ ಅಲ್ಲಹಾಬಾದ್ ಹೈಕೋರ್ಟ್ ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸುತ್ತದೆ ಎಂಬ ಭೀತಿಯ ಆಧಾರದಲ್ಲಿ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಆದೇಶ ನೀಡಿ, ಕೋವಿಡ್-19 ಸೋಂಕು ನಿರೀಕ್ಷಣಾ ಜಾಮೀನು ಪಡೆಯುವುದಕ್ಕೆ ಸೂಕ್ತ ಆಧಾರ ಎಂದು ಉಲ್ಲೇಖಿಸಿತ್ತು.

ಆದರೆ ಸುಪ್ರೀಂ ಕೋರ್ಟ್ ನ ನ್ಯಾ.ವಿನೀತ್ ಶರಣ್, ಬಿ.ಆರ್ ಗವಾಯಿ ಅವರಿದ್ದ ರಜೆ ಪೀಠ, ಅಲಹಾಬಾದ್ ಹೈಕೋರ್ಟ್ ಮೇ.10 ರಂದು ನೀಡಿದ್ದ ಆದೇಶವನ್ನು ಕೋರ್ಟ್ ಗಳು ಪರಿಗಣಿಸಬಾರದೆಂದು ಹೇಳಿದೆ.

ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶವನ್ನು ಬೇರೆ ಯಾವುದೇ ಕೋರ್ಟ್ ಗಳು ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಪರಿಗಣಿಸಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಪ್ರತಿ ಕೇಸ್ ನ ವಿವರಗಳನ್ನು ಪರಿಗಣಿಸಬೇಕಾಗುತ್ತದೆ ಎಂದಿದೆ.

ಕೋವಿಡ್-19 ನಿರೀಕ್ಷಣಾ ಜಮೀನು ನೀಡುವುದಕ್ಕೆ ಆಧಾರವಾಗಿಸಿಕೊಳ್ಳಬಹುದೇ? ಎಂಬುದರ ಬಗ್ಗೆ ಸಲಹೆ ನೀಡುವುದಕ್ಕೆ ಹಿರಿಯ ಅಡ್ವೊಕೇಟ್ ವಿ ಗಿರಿ ಅವರನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿದೆ. ಮೇ.10 ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.

SCROLL FOR NEXT