ದೇಶ

ಬ್ಲ್ಯಾಕ್ ಫಂಗಸ್: ರಾಜ್ಯಗಳಿಗೆ ಆಂಫೊಟೆರಿಸಿನ್ ಬಿ 29,250 ಹೆಚ್ಚುವರಿ ವಯಲ್ ಹಂಚಿಕೆ- ಸದಾನಂದ ಗೌಡ

Raghavendra Adiga

ನವದೆಹಲಿ: ಬ್ಲ್ಯಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ಚಿಕಿತ್ಸೆಯಲ್ಲಿ ಬಳಸಲಾಗುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಹೆಚ್ಚುವರಿ 29,250 ಬಾಟಲುಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ್ಲಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಸದಾನಂದ ಗೌಡ  ಬುಧವಾರ ಮಾಹಿತಿ ನೀಡಿದರು.

ಸಚಿವರು ಟ್ವೀಟ್ ಮಾಡಿ "ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧದಹೆಚ್ಚುವರಿ 29,250 ಬಾಟಲುಗಳನ್ನು ಇಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಕ್ಕೆ  ಹಂಚಿಕೆ ಮಾಡಲಾಗಿದೆ. ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆಯನ್ನು ಆಧರಿಸಿ ಹಂಚಿಕೆ ಮಾಡಲಾಗಿದೆ." ಎಂದಿದ್ದಾರೆ.

ಈ ಮೊದಲು, ಮೇ 24 ರಂದು ಆಂಫೊಟೆರಿಸಿನ್ ಬಿಯ ಹೆಚ್ಚುವರಿ 19,420 ಬಾಟಲುಗಳನ್ನು ಹಂಚಿಕೆ ಮಾಡಲಾಗಿದ್ದು, ಮೇ 21 ರಂದು ದೇಶಾದ್ಯಂತ 23,680 ಬಾಟಲುಗಳನ್ನು ಸರಬರಾಜು ಮಾಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.

SCROLL FOR NEXT