ದೇಶ

ಕೋವಿಡ್: ಕೀನ್ಯಾದಿಂದ ಭಾರತಕ್ಕೆ 12 ಟನ್ ಆಹಾರೋತ್ಪನ್ನ ದೇಣಿಗೆ

Raghavendra Adiga

ನವದೆಹಲಿ: ಆಫ್ರಿಕಾ ಖಂಡದ ಪ್ರಮುಖ ರಾಷ್ಟ್ರ ಕೀನ್ಯಾ ತನ್ನ ಕೋವಿಡ್-19 ಪರಿಹಾರ ಕಾರ್ಯಗಳ ಭಾಗವಾಗಿ ಭಾರತಕ್ಕೆ 12 ಟನ್ ಆಹಾರೋತ್ಪನ್ನಗಳನ್ನು ದೇಣಿಗೆ ನೀಡಿದೆ. 

ಪೂರ್ವ ಆಫ್ರಿಕಾ ರಾಷ್ಟ್ರ ಸ್ಥಳೀಯವಾಗಿ ಉತ್ಪಾದಿಸುವ 12 ಟನ್ ಚಹಾ, ಕಾಫಿ ಮತ್ತು ನೆಲಗಡಲೆಯನ್ನು ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಕಳುಹಿಸಿದ್ದು, ಇದನ್ನು ಮಹಾರಾಷ್ಟ್ರದಾದ್ಯಂತ ವಿತರಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.

"ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಜನರು ಭಾರತ ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕೀನ್ಯಾ ಸರ್ಕಾರ ಬಯಸುತ್ತದೆ" ಎಂದು ಆಫ್ರಿಕನ್ ದೇಶದ ಹೈ ಕಮಿಷನರ್ ವಿಲ್ಲಿ ಬೆಟ್ ಹೇಳಿದ್ದಾರೆ.

ಆಹಾರೋತ್ಪನ್ನಗಳನ್ನು ಹಸ್ತಾಂತರಿಸಲು ನವದೆಹಲಿಯಿಂದ ಮುಂಬೈಗೆ ಬಂದ ಬೆಟ್, ಈ ದೇಣಿಗೆಯನ್ನು ಜೀವರಕ್ಷಣೆಗಾಗಿ ದೀರ್ಘಕಾಲ ಕೆಲಸ ಮಾಡುವ ಮುಂಚೂಣಿ ಕಾರ್ಯಕರ್ತರಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT