ದೇಶ

ಜೂ.5 ರಂದು ಸಂಪೂರ್ಣ ಕ್ರಾಂತಿ ದಿವಸ್ ಆಚರಣೆಗೆ ರೈತರು ನಿರ್ಧಾರ

Srinivas Rao BV

ನವದೆಹಲಿ: ಕೇಂದ್ರ ಕೃಷಿ ಕಾನೂನನ್ನು ವಿರೋಧಿಸಿರುವ ರೈತರು ಜೂ.5 ರಂದು ಸಂಪೂರ್ಣ ಕ್ರಾಂತಿ ದಿವಸ್ ಆಚರಣೆಗೆ ನಿರ್ಧರಿಸಿದ್ದಾರೆ. ಕಾನೂನಿನ ಪ್ರತಿಗಳನ್ನು ಬಿಜೆಪಿ ಸಂಸದರು ಹಾಗೂ ಶಾಸಕರ ಕಚೇರಿಯ ಎದುರು ದಹಿಸುವ ಮೂಲಕ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚ ಹೇಳಿದೆ. 

ಸಂಸತ್ ನಲ್ಲಿ ಕಳೆದ ವರ್ಷ ಸುಗ್ರೀವಾಜ್ಞೆ ಹೊರಡಿಸಿ ಕೇಂದ್ರ ಸರ್ಕಾರ ಕೃಷಿ ಕಾನೂನು ಜಾರಿಗೊಳಿಸಿತ್ತು ನಂತರ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. 

ರೈತರು ಕೇಂದ್ರದ ಕಾಯ್ದೆಗಳನ್ನು ವಿರೋಧಿಸಿರುವ ರೈತರು ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ವರ್ಷ ನವೆಂಬರ್ ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

1974 ರ ಜೂ.05 ರಂದು ಜಯಪ್ರಕಾಶ್ ನಾರಾಯಣ್ ಸಂಪೂರ್ಣ ಕ್ರಾಂತಿ ಘೋಷಿಸಿ ಕೇಂದ್ರ ಸರ್ಕಾರದ ವಿರುದ್ಧ ಚಳುವಳಿಯನ್ನು ಪ್ರಾರಂಭಿಸಿದ್ದರು. ಕಳೆದ ವರ್ಷ ಜೂ.05 ರಂದು ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತ್ತು.

SCROLL FOR NEXT