ದೇಶ

ಕೇದಾರನಾಥ ಧಾಮದ ಬಾಗಿಲು ಚಳಿಗಾಲದವರೆಗೂ ಬಂದ್

Srinivas Rao BV

ಡೆಹ್ರಾಡೂನ್: ಚಾರ್ ಧಾಮ್‌ಗಳಲ್ಲಿ ಒಂದಾದ ಪ್ರಸಿದ್ಧ 11 ನೇ ಜ್ಯೋತಿರ್ಲಿಂಗ ಭಗವಾನ್ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಶನಿವಾರದಂದು ಇಡೀ  ಚಳಿಗಾಲದವರೆಗೆ ಸೇನೆಯ ಬ್ಯಾಂಡ್‌ವ್ಯಾಗನ್‌ನ ಭಕ್ತಿ ರಾಗಗಳ ನಡುವೆ ಮುಚ್ಚಲಾಯಿತು.

ಬ್ರಹ್ಮ ಮುಹೂರ್ತದಿಂದ ಬಾಗಿಲು ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಳಗ್ಗೆ ಆರು ಗಂಟೆಗೆ ಕೇದಾರನಾಥ ಧಾಮದ ದಿಗ್ಪಾಲಕ ಭೈರವನಾಥ ಜೀಗೆ ಅರ್ಚಕ ಬಾಗೇಶ್ ಲಿಂಗ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಶ್ಯಾಂಬು ಶಿವಲಿಂಗಕ್ಕೆ ವಿಭೂತಿ ಹಚ್ಚಲಾಯಿತು. ಇದಾದ ಬಳಿಕ ಬೆಳಗ್ಗೆ ಎಂಟು ಗಂಟೆಗೆ ಮುಖ್ಯದ್ವಾರದ ಬಾಗಿಲು ಮುಚ್ಚಲಾಯಿತು.  ಅದೇ ಸಮಯದಲ್ಲಿ, ಮೂರನೇ ಧಾಮ ಶ್ರೀ ಯಮುನೋತ್ರಿಯ ಬಾಗಿಲುಗಳನ್ನು ಸಹ ಮಧ್ಯಾಹ್ನ ಮುಚ್ಚಲಾಯಿತು.

ಶ್ವೇತವರ್ಣದ ಹಿಮದ ಹೊದಿಕೆಯೊಂದಿಗೆ ಶ್ರೀ ಕೇದಾರನಾಥ ಧಾಮದಿಂದ ಪಂಚ ಮುಖಿ ಡೋಲಿ, ಸೇನಾ ಬ್ಯಾಂಡ್‌ಗಳ ಭಕ್ತಿ ರಾಗಗಳ ನಡುವೆ ದೇವಾಲಯವನ್ನು ಪ್ರದಕ್ಷಿಣೆ ಹಾಕಿ, ವಿವಿಧ ಹಂತಗಳನ್ನು ಹಾದು ಚಳಿಗಾಲದ ಸ್ಥಾನವಾದ ಶ್ರೀ ಓಂಕಾರೇಶ್ವರ ದೇವಸ್ಥಾನ ಉಖಿಮಠಕ್ಕೆ ಪಂಡಿತರು ತೆರಳಿದರು.

SCROLL FOR NEXT