ದೇಶ

ಕಾಶ್ಮೀರದ ಅನಂತನಾಗ್‌ನಲ್ಲಿ ಎಲ್ ಇಟಿ ಉಗ್ರನ ಬಂಧನ, ಹಲವು ಶಸ್ತ್ರಾಸ್ತ್ರ ವಶಕ್ಕೆ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನು ಭದ್ರತಾ ಪಡೆಗಳು ಸೋಮವಾರ ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತ್‌ನಾಗ್‌ನ ಅಶ್ಮುಕಮ್ ಪ್ರದೇಶದ ವಹಾದನ್ ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆ ಜಂಟಿಯಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಯಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಧಿತ ಭಯೋತ್ಪಾದಕನನ್ನು ಹಫೀಜ್ ಅಬ್ದುಲ್ಲಾ ಮಲಿಕ್ ಎಂದು ಗುರುತಿಸಲಾಗಿದೆ. ಈ ಉಗ್ರ ಎಲ್ಇಟಿಯ ಅಂಗ ಸಂಸ್ಥೆ ಎನ್ನಲಾಗುತ್ತಿರುವ ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್ಎಫ್) ನೊಂದಿಗೆ ಸಕ್ರಿಯವಾಗಿದ್ದ ಎಂದು ಅವರು ತಿಳಿಸಿದ್ದಾರೆ.

ಮಲಿಕ್‌ನ ಬಂಧನದ ಸಮಯದಲ್ಲಿ ಆತನ ಬಳಿ ಇದ್ದ ಪಿಸ್ತೂಲ್ ಮತ್ತು ಏಳು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ, ಭದ್ರತಾ ಪಡೆಗಳು ಕಟ್ಸು ಅರಣ್ಯದಿಂದ ಒಂದು ಎಕೆ ರೈಫಲ್, ಎರಡು ಮ್ಯಾಗಜೀನ್‌ಗಳು ಮತ್ತು 40 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿವೆ.

SCROLL FOR NEXT