ದೇಶ

ಸ್ಥಿರ ಕೃಷಿಗೆ ಸಿಒಪಿ 26 ಕ್ರಿಯಾ ಕಾರ್ಯಸೂಚಿಗೆ ಭಾರತ ಸಹಿ? ಏನಿದು ಎನ್ಎಂಎಸ್ಎ?: ಕೇಂದ್ರ ಹೇಳಿದ್ದಿಷ್ಟು...

Srinivas Rao BV

ನವದೆಹಲಿ: ಗ್ಲಾಸ್ಗೋದಲ್ಲಿ ಇತ್ತೀಚೆಗೆ ನಡೆದ ಸಿಒಪಿ-26 ಹವಾಮಾನ ಶೃಂಗಸಭೆಯಲ್ಲಿ ಭಾರತ ಸ್ಥಿರ ಕೃಷಿ ನೀತಿಯ ಕ್ರಿಯಾ ಕಾರ್ಯಸೂಚಿಗೆ ಸಹಿ ಹಾಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಕೃಷಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಯಸೂಚಿಗೆ ಭಾರತ ಸಹಿ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದೆ.

"ಭಾರತ ಕಾರ್ಯಸೂಚಿಗೆ ಸಹಿ ಹಾಕಿದೆ ಎಂಬುದು ಆಧಾರ ರಹಿತ ಹಾಗೂ ತಪ್ಪಾದ ಸುದ್ದಿಯಾಗಿದೆ. ಆದರೆ ಸ್ಥಿರ ಕೃಷಿ ನೀತಿಯ ಕ್ರಿಯಾ ಕಾರ್ಯಸೂಚಿಗೆ ಸಹಿ ಹಾಕಿಲ್ಲ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹವಾಮಾನ ಬದಲಾವಣೆಯ ವಿಷಯವನ್ನು ನಿಭಾಯಿಸಲು ಇರುವ ಹವಾಮಾನ ಬದಲಾವಣೆ ಮೇಲಿನ ರಾಷ್ಟ್ರೀಯ ಕ್ರಿಯಾ ಯೋಜನೆಯಡಿಯಲ್ಲಿ ಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (ಎನ್ಎಂಎಸ್ಎ) ನ್ನು ರಚಿಸಲಾಗಿದೆ.

ಬದಲಾಗುತ್ತಿರುವ ಹವಾಮಾನಕ್ಕೆ ಭಾರತದ ಕೃಷಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದಕ್ಕೆ ಕಾರ್ಯತಂತ್ರಗಳನ್ನು ಬೆಳೆಸಿ ಅದನ್ನು ಜಾರಿಗೊಳಿಸುವುದು ಈ ಮಿಷನ್ ನ ಉದ್ದೇಶವಾಗಿದೆ.

ಸಚಿವಾಲಯದ ಮಾಹಿತಿಯ ಪ್ರಕಾರ, ಎನ್ಎಂಎಸ್ಎಯನ್ನು ಮೂರು ಪ್ರಮುಖ ಘಟಕಗಳಿಗೆ- ಮಳೆಯಾಶ್ರಿತ ಪ್ರದೇಶದ ಅಭಿವೃದ್ಧಿ, ಜಮೀನಿನಲ್ಲಿ ನೀರು ನಿರ್ವಹಣೆ ಮಣ್ಣಿನ ಆರೋಗ್ಯ ನಿರ್ವಹಣೆಗೆ ಎನ್ಎಂಎಸ್ಎ ಅನುಮೋದಿಸಲಾಗಿತ್ತು.

SCROLL FOR NEXT