ಅಲ್ಲು ಅರ್ಜುನ್ 
ದೇಶ

ವಿವಾದಕ್ಕೆ ಕಾರಣವಾದ ನಟ ಅಲ್ಲು ಅರ್ಜುನ್ ಜಾಹೀರಾತು: ಲೀಗಲ್ ನೋಟಿಸ್​ ನೀಡಿದ ಟಿಎಸ್‌ಆರ್‌ಟಿಸಿ

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಎಸ್‌ಆರ್‌ಟಿಸಿ) ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಇತ್ತೀಚಿನ ಜಾಹೀರಾತಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರಿಗೆ ಲೀಗಲ್ ನೋಟಿಸ್ ನೀಡಿದೆ.

ಹೈದರಾಬಾದ್: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಎಸ್‌ಆರ್‌ಟಿಸಿ) ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಇತ್ತೀಚಿನ ಜಾಹೀರಾತಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರಿಗೆ ಲೀಗಲ್ ನೋಟಿಸ್ ನೀಡಿದೆ.

ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿರುವ ಬೈಕ್- ಟ್ಯಾಕ್ಸಿ ಅಪ್ಲಿಕೇಶನ್ ರ‍್ಯಾಪಿಡೋ ಜಾಹೀರಾತಿನಲ್ಲಿ, ಅಲ್ಲು ಅರ್ಜುನ್​ ದೋಸೆ ಮಾರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿಯೊಂದಿಗೆ ಮಾತನಾಡುತ್ತಾ ದೋಸೆ ತಿನ್ನಬೇಕು ಅಂದ್ರೆ ಎರಡೇ ಜಾಗ ಒಂದು ಈ ಗುರು ಹತ್ರ, ಇನ್ನೊಂದು ಯಾವಾಗ್ಲೂ ರಷ್​ ಆಗಿರೋ ಆ ಬಸ್​ನಲ್ಲಿ ಎಂದಿದ್ದಾರೆ. ಅಲ್ಲದೇ ಆ ಬಸ್​ ಹತ್ತುವವರನ್ನು ಕೈಮಾ ಮಾಡಿ ಮಸಾಲೆ ದೋಸೆ ಮಾಡಿ ಇಳಿಸುತ್ತಾರೆ. ಅದಕ್ಕೆ ಸುಮ್ಮನೇ ತೊಂದರೆ ಯಾಕೆ? ರ‍್ಯಾಪಿಡೋ ಬುಕ್​ ಮಾಡಿ, ದೋಸೆ ತಿರುಗಿಸೋ ಅಷ್ಟು ಸುಲಭವಾಗಿ ಅದರಲ್ಲಿ ಹೋಗಬಹುದು ಎಂದಿದ್ದಾರೆ.

ಅವಹೇಳನ ಮಾಡುವುದನ್ನು ಟಿಎಸ್‌ಆರ್‌ಟಿಸಿ ಆಡಳಿತ ಅಥವಾ ಪ್ರಯಾಣಿಕರು ಮತ್ತು ನಮ್ಮ ನೌಕರರು ಹಾಗೂ ನಿವೃತ್ತ ನೌಕರರು ಸಹಿಸುವುದಿಲ್ಲ ಎಂದು ಟಿಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಐಪಿಎಸ್ ವಿಸಿ ಸಜ್ಜನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲು ಅರ್ಜುನ್ ಮತ್ತು ಜಾಹೀರಾತನ್ನು ಪ್ರಚಾರ ಮಾಡುವ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ವಾಸ್ತವವಾಗಿ, ಉತ್ತಮ ಮತ್ತು ಪರಿಸರದ ಹಿತದೃಷ್ಟಿಯಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಜಾಹೀರಾತುಗಳಲ್ಲಿ ನಟರು ನಟಿಸಬೇಕು ಎಂದು ಐಪಿಎಸ್ ಅಧಿಕಾರಿ ಹೇಳಿದ್ದಾರೆ.

ವಿಸಿ ಸಜ್ಜನರ್ ಈ ಹಿಂದೆ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದರು. ನಂತರ ಅವರನ್ನು ವರ್ಗಾಯಿಸಲಾಯಿತು. ಆಗಸ್ಟ್‌ನಲ್ಲಿ ಟಿಎಸ್‌ಆರ್‌ಟಿಸಿ ಎಂಡಿ ಆಗಿ ನೇಮಿಸಲಾಯಿತು. ಸಾರ್ವಜನಿಕ ಸಾರಿಗೆಯ ವಿರುದ್ಧ ಮಾತನಾಡುವುದು ಮತ್ತು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ನಟರು ಹಾಗೂ ಸೆಲೆಬ್ರಿಟಿಗಳಿಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT