ದೇಶ

ಮಹಿಳೆಯರು ಆಭರಣ ಧರಿಸಿ ಮಧ್ಯರಾತ್ರಿ ಕೂಡ ಓಡಾಡಬಹುದು ಎಂದ ಅಮಿತ್ ಶಾ: ಮತ್ತೊಂದು 'ಜೂಮ್ಲಾ' ಎಂದ ಪ್ರಿಯಾಂಕಾ ವಾದ್ರಾ

Vishwanath S

ನವದೆಹಲಿ: ಉತ್ತರ ಪ್ರದೇಶದ ಮಹಿಳೆಯರು ಆಭರಣ ಧರಿಸಿ ಮಧ್ಯರಾತ್ರಿ ಎಲ್ಲಿಗೆ ಬೇಕಾದರೂ ತೆರಳಬಹುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಪ್ರತಿನಿತ್ಯ ಯಾವ ಸಂಕಷ್ಟ ಎದುರಿಸಬೇಕು ಎಂಬುದು ಉತ್ತರ ಪ್ರದೇಶದ ಮಹಿಳೆಯರಿಗೆ ಮಾತ್ರ ಗೊತ್ತು ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ, ದೇಶದ ಗೃಹ ಸಚಿವರು 'ಆಭರಣಗಳನ್ನು ಧರಿಸುತ್ತಾರೆ' ಎಂದು ಹೇಳುತ್ತಾರೆ, ಆದರೆ ಅವರು ಪ್ರತಿದಿನ ಯಾವ ರೀತಿಯ ವಿಷಯಗಳನ್ನು ಎದುರಿಸಬೇಕೆಂದು ಉತ್ತರಪ್ರದೇಶ ಮಹಿಳೆಯರಿಗೆ ಮಾತ್ರ ತಿಳಿದಿದೆ ಎಂದು ಟ್ವೀಟಿಸಿದ್ದಾರೆ.

ಹೀಗಾಗಿಯೇ 'ಲಡ್ಕಿ ಹೂಂ, ಲಢ್ ಸಕ್ತಿ ಹೂಂ'ಬೇಕು. ರಾಜಕೀಯದಲ್ಲಿ ಮತ್ತು ಭದ್ರತೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಲ್ಲಿ ಮಹಿಳೆಯರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದ್ದು, ಕಾನ್ಪುರದಲ್ಲಿ ಮೂವರು ಮಹಿಳೆಯರ ಸರ ಅಪಹರಣದ ಬಗ್ಗೆ ಪ್ರಿಯಾಂಕಾ ಟ್ವಿಟರ್‌ನಲ್ಲಿ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

SCROLL FOR NEXT