ದೇಶ

ಗುಜರಾತಿಗಿಂತಲೂ ಹಿಂದಿ ಎಂದರೆ ಬಹಳ ಪ್ರೀತಿ, ನಮ್ಮ ರಾಷ್ಟ್ರ ಭಾಷೆಯನ್ನು ಬಲಪಡಿಸಬೇಕು: ಅಮಿತ್ ಶಾ

Manjula VN

ವಾರಣಾಸಿ: ಗುಜರಾತಿ ಭಾಷೆಗಿಂತಲೂ ನಾನು ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ನಮ್ಮ ರಾಷ್ಟ್ರ ಭಾಷೆಯನ್ನು ನಾವು ಬಲಪಡಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಭಾರತೀಯ ರಾಜ ಭಾಷಾ (ಅಧಿಕೃತ ಭಾಷೆ) ಸಮ್ಮೇಳನ’ದಲ್ಲಿ ಭಾಗವಹಿಸಿರುವ ಅಮಿತ್ ಶಾ ಅವರು, ನಾನು ಗುಜರಾತಿ ಭಾಷೆಗೂ ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ಅಧಿಕೃತ ಭಾಷೆಯಾಗಿರುವ ಹಿಂದಿಯನ್ನು ಬಲಪಡಿಸಬೇಕಿದೆ ಎಂದು ಅವರು ಹೇಳಿದ್ದಾರೆ,

‘ನಿಮ್ಮ ಮಕ್ಕಳೊಂದಿಗೆ ನಿಮ್ಮ ಮಾತೃಭಾಷೆಯಲ್ಲೇ ಮಾತನಾಡಿ. ಅದರಲ್ಲಿ ನಾಚಿಕೆಪಡುವಂಥದ್ದು ಏನೂ ಇಲ್ಲ. ನಮ್ಮ ಮಾತೃ ಭಾಷೆ ನಮ್ಮ ಹೆಮ್ಮೆ,‘ ಎಂದು ತಿಳಿಸಿದ್ದಾರೆ.

ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದರು; ಅದಕ್ಕೆ ಮೂರು ಆಧಾರ ಸ್ತಂಭಗಳಿದ್ದವು - ಸ್ವರಾಜ್, ಸ್ವದೇಶಿ ಮತ್ತು ಸ್ವಭಾಷಾ. ಸ್ವರಾಜ್ಯವನ್ನು ಸಾಧಿಸಲಾಯಿತು, ಆದರೆ ಸ್ವದೇಶಿ ಮತ್ತು ಸ್ವಭಾಷಾ ಇನ್ನೂ ಹಿಂದೆ ಉಳಿದಿದೆ. ಹಿಂದಿ ಮತ್ತು ನಮ್ಮ ಎಲ್ಲಾ ಸ್ಥಳೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಾವು ರಾಜಭಾಷೆಗೆ ವಿಶೇಷ ಒತ್ತು ನೀಡಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT