ಸಾಂದರ್ಭಿಕ ಚಿತ್ರ 
ದೇಶ

ಬಿಹಾರ: ನಾಲ್ವರನ್ನು ಹತ್ಯೆ ಮಾಡಿ ಬಾಂಬ್ ನಿಂದ ಮನೆ ಸ್ಫೋಟಿಸಿದ ನಕ್ಸಲರು!

ಬಿಹಾರದಲ್ಲಿ ನಕ್ಸಲರು ಬೀಭತ್ಸ ಕೃತ್ಯ ನಡೆಸಿದ್ದಾರೆ. ನಾಲ್ವರು ಗ್ರಾಮಸ್ಥರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದಲ್ಲದೆ, ಅವರಿದ್ದ ಮನೆಗಳನ್ನು ಸ್ಫೋಟಿಸಿರುವ ಘಟನೆ ನಡೆದಿದೆ.

ಗಯಾ: ಬಿಹಾರದಲ್ಲಿ ನಕ್ಸಲರು ಬೀಭತ್ಸ ಕೃತ್ಯ ನಡೆಸಿದ್ದಾರೆ. ನಾಲ್ವರು ಗ್ರಾಮಸ್ಥರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದಲ್ಲದೆ, ಅವರಿದ್ದ ಮನೆಗಳನ್ನು ಸ್ಫೋಟಿಸಿರುವ ಘಟನೆ ನಡೆದಿದೆ.

ಗಯಾ ಜಿಲ್ಲೆಯಲ್ಲಿನ ದುಮಾರಿಯಾ ಬ್ಲಾಕ್ ನ ಮೌನ್ ಬಾರ್ ಗ್ರಾಮದಲ್ಲಿ ಮಾವೋವಾದಿಗಳು ಈ ಕೃತ್ಯ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಮೌನ್ ಬಾರ್ ಗ್ರಾಮದ ನಿವಾಸಿಯಾಗಿರುವ ಸರ್ಜು ಸಿಂಗ್ ಅವರ ಮನೆ ಬಾಂಬ್ ನಿಂದ ಸ್ಫೋಟಿಸಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಗಂಡ-ಹೆಂಡತಿ ಸೇರಿದಂತೆ ನಾಲ್ವರನ್ನು ನೇಣಿಗೇರಿಸಿರುವುದಾಗಿ ತಿಳಿದುಬಂದಿದೆ.

ಸರ್ಜು ಸಿಂಗ್ ಸೇರಿದಂತೆ ಸತ್ಯೇಂದ್ರ ಸಿಂಗ್, ಮಹೇಂದ್ರ ಸಿಂಗ್, ಮನೋರಮಾ ದೇವಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಈ ಹತ್ಯೆಯ ನಂತರ ನಕ್ಸಲೀಯರು ಗ್ರಾಮದಲ್ಲಿ ಪೋಸ್ಟರ್ ಅಂಟಿಸಿದ್ದು, "ಈ ಕುಟುಂಬದ ಸದಸ್ಯರು ನಾಲ್ವರು ನಕ್ಸಲೀಯರ ಹತ್ಯೆಗೆ ಕಾರಣವಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕಾರ ತೀರಿಸಿಕೊಂಡಿರುವುದಾಗಿ" ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!