ದೇಶ

ಬಿರ್ಸಾ ಮುಂಡಾ ಜನ್ಮಜಯಂತಿ 'ಜಂಜಾಟಿಯ ಗೌರವ್ ದಿವಸ್' ಆಗಿ ಆಚರಣೆ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಸ್ವಾತಂತ್ರ್ಯದ 'ಅಮೃತೋತ್ಸವ' ಸಮಯದಲ್ಲಿ, ಬುಡಕಟ್ಟು ಸಂಪ್ರದಾಯಗಳು ಮತ್ತು ಸಮುದಾಯದವರ ಶೌರ್ಯದ ಕಥೆಗಳಿಗೆ ಇನ್ನಷ್ಟು ಭವ್ಯವಾದ ಗುರುತನ್ನು ನೀಡಲಾಗುವುದು ಎಂದು ನಿರ್ಧರಿಸಲಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು 'ಜಂಜಾಟಿಯ ಗೌರವ್ ದಿವಸ್' ಎಂದು ಆಚರಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅವರು ಇಂದು ದೆಹಲಿಯಲ್ಲಿ ಬುಡಕಟ್ಟು ಜನಾಂಗದ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಜಯಂತಿ ಅಂಗವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ನನ್ನ ಜೀವನದ ಬಹುಭಾಗವನ್ನು ಬುಡಕಟ್ಟು ಜನಾಂಗದ ಸೋದರ-ಸೋದರಿಯರು ಮತ್ತು ಮಕ್ಕಳೊಂದಿಗೆ ಕಳೆದಿದ್ದೇನೆ. ಅವರ ಜೀವನದ ಸುಖ-ಸಂತೋಷಗಳು, ದೈನಂದಿನ ಜೀವನ ಮತ್ತು ಅವರ ಜೀವನದ ಅವಶ್ಯಕತೆಗಳನ್ನು ನೋಡಿದ್ದೇನೆ. ಬುಡಕಟ್ಟು ಜನಾಂಗದವರ ವೈಯಕ್ತಿಕ ಜೀವನ ನನಗೆ ಅತ್ಯಂತ ಭಾವನಾತ್ಮಕ ದಿನವಾಗಿದೆ ಎಂದು ಹೇಳಿದರು.

ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ದೃಢ ನಿರ್ಧಾರದಿಂದಾಗಿ ಜಾರ್ಖಂಡ್ ಅಸ್ತಿತ್ವಕ್ಕೆ ಬಂದಿತು. ಬುಡಕಟ್ಟು ವ್ಯವಹಾರಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಬುಡಕಟ್ಟು ಜನಾಂಗದವರ ಹಿತಾಸಕ್ತಿಗಳು, ಯೋಜನೆಗಳನ್ನು ದೇಶಕ್ಕೆ ಸಂಪರ್ಕಿಸಿದರು. ಇಂದು ಜಾರ್ಖಂಡ್ ಸಂಸ್ಥಾಪನಾ ದಿನದಂದು ಅಟಲ್ ಬಿಹಾರಿ ವಾಜಪೇಯಿಯವರಿಗೂ ನಮನ ಸಲ್ಲಿಸುತ್ತೇನೆ ಎಂದರು.

SCROLL FOR NEXT