ದೇಶ

ಅರವಿಂದ್ ಕೇಜ್ರಿವಾಲ್ ಗೋವಾ ಭೇಟಿ ವೇಳೆ ಬಿಜೆಪಿ ನಾಯಕ ಎಎಪಿ ಸೇರ್ಪಡೆ

Lingaraj Badiger

ನವದೆಹಲಿ: ಗೋವಾದ ಪೊರಿಯಮ್ ಕ್ಷೇತ್ರದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಅವರು ಮಂಗಳವಾರ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರದಿಂದ ಎರಡು ದಿನಗಳ ಗೋವಾ ಪ್ರವಾಸದಲ್ಲಿದ್ದಾರೆ. ನಾಳೆ ಮಧ್ಯಾಹ್ನ 2 ಗಂಟೆಗೆ ಗೋವಾ ತಲುಪಲಿದ್ದಾರೆ. ವಿಧಾನಸಭೆ ಚುನಾವಣೆ ಎದುರಿಸಲಿರುವ ಗೋವಾಗೆ ದೆಹಲಿ ಸಿಎಂ ಮೂರನೇ ಬಾರಿ ಭೇಟಿ ನೀಡುತ್ತಿದ್ದಾರೆ.

ರಾಣೆ ಮಂಗಳವಾರ ಸಂಜೆ 7 ಗಂಟೆಗೆ ತಮ್ಮ ಕ್ಷೇತ್ರದ ನೂರಾರು ಬೆಂಬಲಿಗರೊಂದಿಗೆ ಎಎಪಿ ಸೇರಲಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ 17 ಶಾಸಕರನ್ನು ಹೊಂದಿದೆ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್‌ಪಿ)ಯ ವಿಜಯ್ ಸರ್ದೇಸಾಯಿ ಹಾಗೂ ಮೂವರು ಸ್ವತಂತ್ರ ಶಾಸಕರ ಬೆಂಬಲ ಹೊಂದಿದೆ. GFP ಮತ್ತು MGP ತಲಾ ಮೂವರು ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 15 ಶಾಸಕರನ್ನು ಹೊಂದಿದೆ.

SCROLL FOR NEXT