ದೇಶ

99 ರಾಷ್ಟ್ರಗಳ ಪ್ರಯಾಣಿಕರಿಗೆ ಕ್ವಾರಂಟೈನ್ ಮುಕ್ತ ಪ್ರವೇಶಕ್ಕೆ ಭಾರತ ಅವಕಾಶ

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ನಿರ್ಬಂಧ ಹೇರಲಾಗಿದ್ದ ಸುಮಾರು 20 ತಿಂಗಳ ನಂತರ 99 ರಾಷ್ಟ್ರಗಳಿಂದ ಆಗಮಿಸುವ ಪ್ರವಾಸಿಗರು  ಕ್ವಾರಂಟೈನ್ ಇಲ್ಲದೆ ಮುಕ್ತವಾಗಿ ಪ್ರಯಾಣಿಸಲು ಸೋಮವಾರ ಅವಕಾಶ ನೀಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ  ನವೆಂಬರ್ 1 ರಂದು ಅಂತಾರಾಷ್ಟ್ರೀಯ ಪ್ರವಾಸಿಗರಿಗಾಗಿ ಪರಿಷ್ಕರಿಸಲಾದ ಮಾರ್ಗಸೂಚಿ ಪ್ರಕಾರ  ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ , ಜರ್ಮನಿ, ಆಸ್ಟ್ರೇಲಿಯಾ, ನೆದರ್ ಲ್ಯಾಂಡ್ ಮತ್ತು ರಷ್ಯ ಸೇರಿದಂತೆ ಎ ಕೆಟಗರಿ ಪಟ್ಟಿಯಲ್ಲಿ ಬರುವ 99 ರಾಷ್ಟ್ರಗಳ, ಸಂಪೂರ್ಣ ಡೋಸ್ ಪಡೆದ ಪ್ರವಾಸಿಗರು ಕೋವಿಡ್-19 ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಅಪ್ ಲೋಡ್ ಮಾಡುವುದರ ಹೊರತಾಗಿ ಸ್ವಯಂ ಘೋಷಣೆಯ ಫಾರಂ ಒಂದನ್ನು ಏರ್ ಸುವಿಧಾ ಪೋರ್ಟಲ್ ನಲ್ಲಿ ಸಲ್ಲಿಸಬೇಕಾಗುತ್ತದೆ. 

ಪ್ರಯಾಣ ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ RT-PCR ಪರೀಕ್ಷೆ ಮಾಡಿಸಬೇಕಾಗುತ್ತದೆ. ಅಲ್ಲದೇ ಪ್ರತಿ ಪ್ರಯಾಣಿಕರು ದೃಢೀಕರಣಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಸಲ್ಲಿಸಬೇಕು ಮತ್ತು ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆಗೆ ಜವಾಬ್ದಾರರಾಗಿರುತ್ತಾರೆ.

ರಾಷ್ಟ್ರೀಯವಾಗಿ  ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಲಸಿಕೆಗಳ ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆಯ ಕುರಿತು ಭಾರತದೊಂದಿಗೆ ಒಪ್ಪಂದಗಳನ್ನು ಹೊಂದಿರುವ ದೇಶಗಳಿವೆ. ಅಂತೆಯೇ, ಭಾರತದೊಂದಿಗೆ ಅಂತಹ ಒಪ್ಪಂದವನ್ನು ಹೊಂದಿಲ್ಲದ ದೇಶಗಳಿವೆ, ಆದರೆ ಅವರು ಈಗಾಗಲೇ ಭಾರತೀಯ ಲಸಿಕೆ ಪ್ರಮಾಣ ಪತ್ರ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಪಡೆದ ಲಸಿಕೆ ಹಾಕಿದ ಭಾರತೀಯರ ಪ್ರಯಾಣಿಕರ ಪ್ರವೇಶಕ್ಕೆ ಅನುಮತಿ ಕಲ್ಪಿಸಿವೆ.

ಪರಸ್ಪರ ಸಂಬಂಧದ ಆಧಾರದ ಮೇಲೆ (ಎ ಕೆಟಗರಿ) ಅಡಿಯಲ್ಲಿ ಬರುವ ಈ ಎಲ್ಲಾ ರಾಷ್ಟ್ರಗಳ ಪ್ರವಾಸಿಗರಿಗೆ  ಕ್ವಾರಂಟೈನ್ ಇಲ್ಲದೆ ಮುಕ್ತವಾಗಿ ದೇಶ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

SCROLL FOR NEXT