ದೇಶ

ಹೈದರ್ ಪೋರಾ ಎನ್ ಕೌಂಟರ್: ಉಗ್ರರಿಗೆ ಆಶ್ರಯ ನೀಡಿದ್ದ ಬ್ಯುಸಿನೆಸ್ ಮ್ಯಾನ್  ಗುಂಡಿನ ಕಾಳಗದಲ್ಲಿ ಹತ್ಯೆ- ಪೊಲೀಸರು 

Nagaraja AB

ಶ್ರೀನಗರ: ಹೈದರ್ ಪೊರಾದಲ್ಲಿ ಸೋಮವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಣ ನಡೆದ ಗುಂಡಿನ ಚಕಮಕಿಯಲ್ಲಿ ಬ್ಯುಸಿನೆಸ್ ಮ್ಯಾನ್ ಮೊಹಮ್ಮದ್ ಅಲ್ತಾಪ್ ಭಟ್ ಸಾವನ್ನಪ್ಪಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.

 ಆದರೆ, ಆತನನ್ನು ಉಗ್ರರ ಆಶ್ರಯದಾತ ಎಂದು ಪರಿಗಣಿಸಲಾಗಿದೆ. ತನ್ನ ಮನೆಯಲ್ಲಿ ಉಗ್ರರು ಬಾಡಿಗೆಗೆ ಇರುವ ಬಗ್ಗೆ ಆತ ಪೊಲೀಸರಿಗೆ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಶ್ರೀನಗರದ ಹೈದರ್ ಪೋರಾದಲ್ಲಿ ಸೋಮವಾರ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನದ ಉಗ್ರ, ಮತ್ತು ಆತನ ಸ್ಥಳೀಯ ಸಹಚರಸೇರಿದಂತೆ ನಾಲ್ವರು ಮೃತಪಟ್ಟಿದ್ದರು. ಇದರಲ್ಲಿ ಅಲ್ತಾಪ್ ಭಟ್ ಕೂಡಾ ಸಾವನ್ನಪ್ಪಿದ್ದ.

ಗುಂಡಿನ ಕಾಳಗದಲ್ಲಿ ಉಗ್ರರೊಂದಿಗೆ ಅಲ್ತಾಪ್ ಹತ್ಯೆಯಾಗಿದೆಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಯಾರು ಗುಂಡಿನ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದರು ಎಂಬುದು ಗೊತ್ತಾಗಲಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ತಾಫ್ ಭಟ್ ಹತ್ಯೆಗೆ ವಿಷಾಧ ವ್ಯಕ್ತಪಡಿಸಿದ್ದರೂ, ಮೃತನನ್ನು ಉಗ್ರರ ಆಶ್ರಯದಾತ ಎಂದು ಪರಿಗಣಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ. 

ಆಲ್ತಾಫ್ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದ ಆದರೆ, ಅದರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ. ಇಂತಹ ಮಾಹಿತಿಯನ್ನು ಮಾಲೀಕರು ಮುಚ್ಚು ಇಡದಿರುವುದು ಅವರ ಜವಾಬ್ದಾರಿ. ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ಪರಿಶೀಲಿಸಬೇಕಾಗಿತ್ತು ಎಂದು ಐಜಿಪಿ ಹೇಳಿದರು.

ಆಲ್ತಾಫ್ ಮನೆಯಲ್ಲಿ ಬಾಡಿಗೆಯಲ್ಲಿದ್ದ ಮುದಸಿರ್ ಗುಲ್, ಉಗ್ರ ಸಂಘಟನೆಯೊಂದಿಗೆ ತೊಡಗಿಸಿಕೊಂಡಿದ್ದ, ಆತ ಜಮಲತ್ತದಿಂದ ಉಗ್ರರನ್ನು ಕರೆದುಕೊಂಡು ಬಂದಿದ್ದ. ತನ್ನ ಸ್ವಂತ ಕಾರಿನಲ್ಲಿಯೇ ಹೈದರ್ ಫೋರಾಗೆ ಉಗ್ರರನ್ನು ಕರೆತಂದಿದ್ದ ಎಂದು ಐಜಿಪಿ ತಿಳಿಸಿದರು. 

ಕಂಪ್ಯೂಟರ್, ಮೊಬೈಲ್ ಫೋನ್, ಅಮೆರಿಕದ ನಕ್ಷೆ ಮತ್ತಿತರ ವಸ್ತುಗಳನ್ನು ಉಗ್ರರಿಂದ ವಶಕ್ಕೆ ಪಡೆದಿದ್ದೇವೆ, ಮುಂದಿನ ವಿಚಾರಣೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

SCROLL FOR NEXT