ದೇಶ

ದ್ವೇಷಕಾರಿ ಭಾಷಣ ಪ್ರಕರಣ: ಅಕ್ಬರುದ್ದೀನ್ ಓವೈಸಿ ನಿರ್ದೋಷಿ- ವಿಶೇಷ ನ್ಯಾಯಾಲಯ ತೀರ್ಪು

Nagaraja AB

ಹೈದರಾಬಾದ್: 2004ರಲ್ಲಿ  ದಾಖಲಾಗಿದ್ದ ದ್ವೇಷಕಾರಿ ಭಾಷಣ ಪ್ರಕರಣದಲ್ಲಿ  ಎಐಎಂಐಎಂ ಮುಖಂಡ ಹಾಗೂ ಶಾಸಕ ಅಕ್ಬರುದ್ದೀನ್ ಓವೈಸಿ ವಿರುದ್ಧ ನಿರ್ದೋಷಿ ಎಂದು ವಿಶೇಷ ನ್ಯಾಯಾಲಯವೊಂದು  ತೀರ್ಪು ನೀಡಿದೆ. 

ಮಂಗಳವಾರ ಚುನಾಯಿತ ಪ್ರತಿನಿಧಿಗಳ ಮೇಲಿನ ಪ್ರಕರಣ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಓವೈಸಿ ವಿರುದ್ದದ ಆರೋಪದಲ್ಲಿ ತಪಿತಸ್ಥನಲ್ಲ ಎಂಬುದನ್ನು ಪತ್ತೆ ಹಚ್ಚಿದ್ದು, ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. 

2004ರ ಮಾರ್ಚ್ ನಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೈದರಾಬಾದ್ ನಲ್ಲಿ ಅಕ್ಬರುದ್ದೀನ್ ಓವೈಸಿ ದ್ವೇಷಕಾರಿ ಭಾಷಣ ಮಾಡಿದ್ದ ಆರೋಪದ ಮೇರೆಗೆ ಆತನ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಂಬಂಧಿತ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ತದನಂತರ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದರು.

ವಾದ, ವಿವಾದ ಆಲಿಸಿದ ನಂತರ, ಸಾಕ್ಷ್ಯಗಳ ಕೊರತೆಯಿಂದಾಗಿ ಓವೈಸಿ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತು.

SCROLL FOR NEXT