ದೇಶ

ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ: ಕಂಗನಾ ರಣಾವತ್ ವಿರುದ್ಧ ಬಿಜೆಪಿ ಮುಖಂಡ ವಾಗ್ದಾಳಿ

Nagaraja AB

ನವದೆಹಲಿ: ಮಹಾತ್ಮ ಗಾಂಧೀಜಿ ವಿರುದ್ಧ ಸರಣಿ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ  ದೆಹಲಿ ಬಿಜೆಪಿ ವಕ್ತಾರ ನಿಘಾತ್ ಅಬ್ಬಾಸ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರೇರಣೆಯಾಗಿದ್ದರೂ ಕಂಗನಾ ಅವರ ಇಂತಹ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅಪಖ್ಯಾತಿ ತರುತ್ತದೆ ಎಂದು ಅವರು ಹೇಳಿದ್ದಾರೆ.

ಗಾಂಧೀಜಿ ಅವರ ಅಸಂಬಂಧ ಹೇಳಿಕೆ ನೀಡುವ ಮೂಲಕ ಕಂಗನಾ ಏನಾಗಲು ಬಯಸುತ್ತಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಇಂತಹ ಅಸಂಬದ್ಧ ಹೇಳಿಕೆ ಮೂಲಕ ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ನಿಯಮಿತವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದು, ದೇಶದ ಜನರಿಗೆ ನೋವುಂಟು ಮಾಡುತ್ತಿದ್ದಾರೆ. ಅವರು ದೇಶದ ಜನತೆಗೆ ನೋವುಂಟು ಮಾಡುತ್ತಿಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅಪಖ್ಯಾತಿ ತರುತ್ತಿದ್ದಾರೆ ಎಂದು ನಿಘಾತ್ ಅಬ್ಬಾಸ್ ತಮ್ಮ ಟ್ವೀಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 

ಮತ್ತೊಂದು ಕೆನ್ನೆ ತೋರಿಸುವುದು ಸ್ವಾತಂತ್ರ್ಯವಲ್ಲ, ಅದು ಭಿಕ್ಷೆ ಎಂದು ಹೇಳುವ ಮೂಲಕ ಗಾಂಧೀಜಿ ಅವರ ಹೇಳಿಕೆಯನ್ನು ಮಂಗಳವಾರ ಅಣಕಿಸಿದ್ದ ಕಂಗನಾ, ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಗೆ ಮಹಾತ್ಮ ಗಾಂಧಿ ಅವರಿಂದ ಬೆಂಬಲ ಸಿಕ್ಕಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಮತ್ತೊಬ್ಬ ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಕೂಡಾ ರಣಾವತ್ ಅವರ ಹೇಳಿಕೆ  ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಮಾಡಿದ ಅವಮಾನ  ಎಂದು ಹೇಳಿದರಲ್ಲದೇ, ಅವರ ವಿರುದ್ಧ ನ್ಯಾಯಾಂಗ ಕ್ರಮಕ್ಕೆ ಒತ್ತಾಯಿಸಿದರು.

SCROLL FOR NEXT