ದೇಶ

5 ದಶಕಗಳ ಸಾರ್ವಜನಿಕ ಜೀವನದಲ್ಲಿ ರೈತರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇನೆ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದರು. ಇಂದು ನವೆಂಬರ್ 19 ಗುರುನಾನಕ್ ಜಯಂತಿಯಾಗಿದ್ದು ಅದರ ಶುಭಾಶಯಗಳನ್ನು ದೇಶವಾಸಿಗಳಿಗೆ ತಿಳಿಸಿ ಪ್ರಧಾನಿ ಮಾತು ಆರಂಭಿಸಿದರು.

ನನ್ನ 5 ದಶಕಗಳ ಸಾರ್ವಜನಿಕ ಜೀವನದಲ್ಲಿ ಹತ್ತಿರದಿಂದ ರೈತರ ಸಮಸ್ಯೆಗಳನ್ನು ನೋಡಿದ್ದೇನೆ. ನಮ್ಮ ದೇಶದಲ್ಲಿ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು ಅದರಲ್ಲಿಯೇ ಕಷ್ಟಪಟ್ಟು ದುಡಿದು ತಮ್ಮ ಸಂಸಾರವನ್ನು ನಿರ್ವಹಣೆ ಮಾಡುತ್ತಾರೆ. 

ಸಣ್ಣ ರೈತರು, ಹಿಡುವಳಿದಾರರಿಗೆ ಸಹಾಯವಾಗಲು ಕೇಂದ್ರ ಸರ್ಕಾರ ವಿಮೆ ಸೌಲಭ್ಯ, ನೇರ ನಗದು ವರ್ಗಾವಣೆಯಂತಹ ಯೋಜನೆಗಳನ್ನು ತಂದಿದೆ. ದೇಶದ ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡುಗಳನ್ನು ನೀಡಲಾಗಿದ್ದು, ಇದರಿಂದ ರೈತರು ಭೂಮಿಯಲ್ಲಿ ಉತ್ಪಾದನೆ ಹೆಚ್ಚಿಸಬಹುದಾಗಿದೆ ಎಂದರು.

SCROLL FOR NEXT