ದೇಶ

3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್: ಭಾರತದಲ್ಲಿ ಈ ಕೃಷಿ ಕಾನೂನನ್ನು ಹೇಗೆ ರದ್ದುಗೊಳಿಸಲಾಗುತ್ತದೆ?

Srinivasamurthy VN

ನವದೆಹಲಿ: ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದರು.

"ನಾನು ಏನು ಮಾಡಿದ್ದೇನೋ, ಅದನ್ನು ರೈತರಿಗಾಗಿ ಮಾಡಿದ್ದೇನೆ. ನಾನು ಮಾಡುತ್ತಿರುವುದು ದೇಶಕ್ಕಾಗಿ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಾವು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಪ್ರಧಾನಿ ಮೋದಿ ಹೇಳಿದರು.

ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಂದು ಪ್ರಾರಂಭವಾಗಲಿದ್ದು, ಡಿಸೆಂಬರ್ 23 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. 

ಭಾರತದಲ್ಲಿ ಕಾನೂನನ್ನು ಹೇಗೆ ರದ್ದುಗೊಳಿಸಲಾಗುತ್ತದೆ?
ಯಾವುದೇ ಕಾನೂನಿನ ರೀತಿಯಲ್ಲಿಯೇ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕಾಗುತ್ತದೆ. ಈ ಅಧಿವೇಶನದಲ್ಲಿಯೇ ಇದನ್ನು ಮಂಡಿಸಬಹುದು. ಸಂಸತ್ತಿನಲ್ಲಿ ಅದನ್ನು ಮಂಡಿಸಬೇಕು, ನಂತರ ಚರ್ಚೆ ಮತ್ತು ಮತ ಚಲಾಯಿಸಬೇಕು. ಸಮಯಾವಧಿಯು ರಾಜಕೀಯ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಪಕ್ಷಗಳು ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತವೆಯೇ ಎಂದು ಸುಭಾಷ್ ಕಶ್ಯಪ್ ಹೇಳಿದರು.

ತಿದ್ದುಪಡಿಗಾಗಿ ಪ್ರಸ್ತಾವನೆಯನ್ನು ಸಂಬಂಧಪಟ್ಟ ಸಚಿವಾಲಯವು ಕಾನೂನು ಸಚಿವಾಲಯಕ್ಕೆ ಕಳುಹಿಸಬೇಕಾಗುತ್ತದೆ. ಸಚಿವಾಲಯವು ಕಾನೂನು ಅಂಶಗಳನ್ನು ಪರಿಶೀಲಿಸುತ್ತದೆ. ನಂತರ ಸಂಬಂಧಪಟ್ಟ ಸಚಿವರು, ಅಂದ್ರೆ ಕಾನೂನು ಸಚಿವರಲ್ಲ. ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುತ್ತಾರೆ ಎಂದು ಸುಭಾಷ್ ಕಶ್ಯಪ್ ಹೇಳಿದರು.

ಹೆಚ್ಚಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ನವೆಂಬರ್ 28, 2020 ರಿಂದ ದೆಹಲಿಯ ಹಲವಾರು ಗಡಿ ಭಾಗಗಳಲ್ಲಿ ಕ್ಯಾಂಪ್ ಹಾಕಿ, ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.

SCROLL FOR NEXT