ದೇಶ

ಬಾಲಾಕೋಟ್ ವಾಯುದಾಳಿಯಲ್ಲಿ ಪಾಕ್ ಹುಟ್ಟಡಗಿಸಿದ್ದ ಅಭಿನಂದನ್ ವರ್ಧಮಾನ್ ಗೆ ವೀರ ಚಕ್ರ ಪದಕ ಪ್ರದಾನ: ವಿಡಿಯೋ

Nagaraja AB

ನವದೆಹಲಿ: ಇತ್ತೀಚಿಗೆ ಬಡ್ತಿ ಪಡೆದಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಿದರು.

ಬಾಲಾಕೋಟ್ ವಾಯು ದಾಳಿಯ ನಂತರ ಭಾರತ ಮತ್ತು ಪಾಕ್ ಗಡಿಯಲ್ಲಿ ಹಾರಾಟ ನಡೆಸಿದ್ದ ಪಾಕ್ ವಾಯುಪಡೆಯ ವಿಮಾನವನ್ನು ಹೊಡೆದುರುಳಿಸಿದ ಕಾರಣಕ್ಕಾಗಿ ಅವರಿಗೆ ವೀರ ಚಕ್ರ ಪ್ರಶಸ್ತಿಗೌರವ ಲಭಿಸಿದೆ .

ಈ ಘಟನೆ ನಂತರ ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ವಾಯುಪಡೆ ತನ್ನ ವಶಕ್ಕೆ ತೆಗೆದುಕೊಂಡು. ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಅವರನ್ನು ನಂತರ ಬೇಷರತ್ತಾಗಿ ಬಿಡುಗಡೆ ಮಾಡಿತ್ತು.

ಪಾಕ್ ಆಕ್ರಮಿತ ಗಡಿಯಲ್ಲಿ, ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಸರ್ಜಿಕಲ್ ದಾಳಿ ನಡೆಸಿ ಭಯೋತ್ಪಾದಕರ ನೆಲೆಗಳನ್ನು ದ್ವಂಸಗೊಳಿಸಿತ್ತು. ನಂತರ ಸರ್ಜಿಕಲ್ ದಾಳಿ ವಿಚಾರ ದೇಶಾದ್ಯಂತ ಮನೆಮಾತಾಗಿ ಭಾರತೀಯ ವೀರ ಯೋಧರ ಸಾಹಸವನ್ನು ದೇಶ ಕೊಂಡಾಡಿತ್ತು.

SCROLL FOR NEXT