ಒಡಿಶಾ: ಆಪ್ ಮೂಲಕ 1465 ಬೋಗಸ್ ರೈತರ ಪತ್ತೆ: ಉಪಗ್ರಹ ಚಿತ್ರಗಳ ನೆರವು
ಪತ್ತೆಯಾಗಿರುವ ಬೋಗಸ್ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ.
ಭುವನೇಶ್ವರ: ಒಡಿಶಾದ ಕೊರಪುತ್ ಎಂಬಲ್ಲಿ ಭತ್ತ ಮಾರಾಟಕ್ಕೆಂದು 38,706 ಮಂದಿ ರೈತರು ಹೆಸರು ನೊಂದಾಯಿಸಿಕೊಂಡಿದ್ದರು. ಅವರಲ್ಲಿ 1465 ಮಂದಿ ನಕಲಿ ಎಂಬುದು ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಡಳಿತಕ್ಕೆ ಅನುಮಾನ ಬಂದು remote sensing application ಸಹಾಯದಿಂದ ಪರಿಶೀಲನೆ ನಡೆಸಿತ್ತು. ಸುಮಾರು 6,000 ಅರ್ಜಿಗಳು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ತಪಾಸನೆಗೆ ಮುಂದಾಗಿತ್ತು.
ಅದಕ್ಕಾಗಿ 6,000 ಭತ್ತದ ಗದ್ದೆಗಳ ಇರುವಿಕೆ ಖಾತರಿ ಪಡಿಸಿಕೊಳ್ಳಲು ಅಧಿಕಾರಿಗಳು ತಂತ್ರಜ್ನಾನದ ಮೊರೆ ಹೋಗಿದ್ದರು. ಉಪಗ್ರಹ ಚಿತ್ರಗಳ ನೆರವು ಪಡೆದುಕೊಳ್ಳಲಾಗಿದೆ ಎನ್ನುವುದು ವಿಶೇಷ.
ಪತ್ತೆಯಾಗಿರುವ ಬೋಗಸ್ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ.
remote sensing app ಮೂಲಕ ಅಸಲಿ ರೈತರ ಪತ್ತೆ ಸುಲಭವಾಗಲಿದೆ, ವ್ಯವಸ್ಥೆ ಪಾರದರ್ಶಕವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಯಲಲಿತಾ ನಿವಾಸ ಸ್ವಾಧೀನ ಆದೇಶ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್, ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವೇದ ನಿಲಯಂ
Related Article
ಸಿಖ್ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ನಟಿ ಕಂಗನಾಗೆ ದೆಹಲಿ ಸರ್ಕಾರದ ಸಮನ್ಸ್!
ಕೋರ್ಟ್ ಆದೇಶದಂತೆ ತನಿಖೆಗೆ ಸಹಕರಿಸುತ್ತೇನೆ: ಮುಂಬೈನಲ್ಲಿ ಪರಮ್ ಬೀರ್ ಸಿಂಗ್ ಹೇಳಿಕೆ
ಕಾಶ್ಮೀರ 'ಉಳಿಸಿಕೊಳ್ಳಲು' ಬಯಸಿದರೆ 370 ವಿಧಿಯನ್ನು ಮರುಸ್ಥಾಪಿಸಿ, ಸಮಸ್ಯೆ ಬಗೆಹರಿಸಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ